ಬಿಹಾರಕ್ಕೆ ಕೇಂದ್ರ ಚುನಾವಣಾ ಆಯೋಗದ ತಂಡ ಭೇಟಿ
ಪಾಟ್ನಾ, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : 2025 ರ ಬಿಹಾರ ವಿಧಾನ ಸಭಾ ಚುನಾವಣೆಗೆ ಸಿದ್ಧತೆ ಪರಿಶೀಲಿಸಲು ಭಾರತ ಚುನಾವಣಾ ಆಯೋಗದ ತಂಡವು ಎರಡು ದಿನಗಳ ಭೇಟಿಗಾಗಿ ಪಾಟ್ನಾಗೆ ಆಗಮಿಸಿದೆ. ತಂಡದ ನೇತೃತ್ವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಹಿಸಿದ್ದು, ಇವರ ಜೊತೆಗೆ ಚುನಾವಣಾ ಆಯುಕ್ತರು ವಿ
EC


ಪಾಟ್ನಾ, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : 2025 ರ ಬಿಹಾರ ವಿಧಾನ ಸಭಾ ಚುನಾವಣೆಗೆ ಸಿದ್ಧತೆ ಪರಿಶೀಲಿಸಲು ಭಾರತ ಚುನಾವಣಾ ಆಯೋಗದ ತಂಡವು ಎರಡು ದಿನಗಳ ಭೇಟಿಗಾಗಿ ಪಾಟ್ನಾಗೆ ಆಗಮಿಸಿದೆ. ತಂಡದ ನೇತೃತ್ವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಹಿಸಿದ್ದು, ಇವರ ಜೊತೆಗೆ ಚುನಾವಣಾ ಆಯುಕ್ತರು ವಿವೇಕ್ ಜೋಶಿ ಮತ್ತು ಎಸ್.ಎಸ್. ಸಂಧು ಇದ್ದಾರೆ.

ಭೇಟಿ ವೇಳೆ, ತಂಡವು ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲಿದ್ದು, ಬಿಜೆಪಿ, ಜೆಡಿಎಸ್, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಭಾಗವಹಿಸಲು ಆಹ್ವಾನಿಸಲಾಗಿದೆ.

ಮೊದಲ ದಿನ, ಆಯೋಗದ ತಂಡವು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸಲಹೆಗಳು ಮತ್ತು ನಿರೀಕ್ಷೆಗಳ ಕುರಿತು ಚರ್ಚೆ ನಡೆಸಲಿದೆ. ನಂತರ, ಎಲ್ಲಾ ವಿಭಾಗೀಯ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕರು, ಉಪ ಮಹಾನಿರೀಕ್ಷಕರು, ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಯುತ್ತದೆ. ಈ ಸಭೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಆಡಳಿತಾತ್ಮಕ ಹಾಗೂ ಕಾನೂನು ಸುವ್ಯವಸ್ಥೆಗಳ ಸಿದ್ಧತೆ ಪರಿಶೀಲಿಸಲಾಗುವುದು.

ಅಕ್ಟೋಬರ್ 5ರಂದು, ತಂಡವು ನೋಡಲ್ ಅಧಿಕಾರಿಗಳೊಂದಿಗೆ ಭೇಟಿಯಾಗಿ ನ್ಯಾಯಯುತ ಮತ್ತು ಸುರಕ್ಷಿತ ಚುನಾವಣೆ ನಿರ್ವಹಣೆಗೆ ಸಿದ್ಧತೆ ಪರಿಶೀಲಿಸಲಿದೆ. ಮುಖ್ಯ ಆಯುಕ್ತರು ಮತ್ತು ಆಯೋಗದ ಸದಸ್ಯರು ರಾಜ್ಯ ಪೊಲೀಸ್ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪಾಟ್ನಾದಲ್ಲಿ ಪತ್ರಿಕಾಗೋಷ್ಠಿ ಮೂಲಕ ಅವರು ಮಾರ್ಗಸೂಚಿಗಳು ಮತ್ತು ಚುನಾವಣೆ ಸಿದ್ಧತೆಯ ವಿವರಗಳನ್ನು ಪ್ರಕಟಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande