2ನೇ ಟಿ20 ; ಬಾಂಗ್ಲಾದೇಶಕ್ಕೆ ಸರಣಿ ಜಯ
ಶಾರ್ಜಾ, 04 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಾಂಗ್ಲಾದೇಶ ಶುಕ್ರವಾರ ರಾತ್ರಿ ನಡೆದ 2ನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 2 ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 147/5 ರನ್ ಗಳಿಸಿತು. ಇಬ
T20


ಶಾರ್ಜಾ, 04 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಾಂಗ್ಲಾದೇಶ ಶುಕ್ರವಾರ ರಾತ್ರಿ ನಡೆದ 2ನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 2 ವಿಕೆಟ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 147/5 ರನ್ ಗಳಿಸಿತು. ಇಬ್ರಾಹಿಂ ಜದ್ರಾನ್ (38) ಮತ್ತು ರಹಮಾನುಲ್ಲಾ ಗುರ್ಬಾಜ್ (30) ಉತ್ತಮ ಕೊಡುಗೆ ನೀಡಿದರು. ಬಾಂಗ್ಲಾದೇಶ ಪರ ನಸುಮ್ ಅಹ್ಮದ್ 2/25, ರಿಶಾದ್ ಹೊಸೈನ್ 2/45 ವಿಕೆಟ್ ಪಡೆದರು.

ಬಾಂಗ್ಲಾದೇಶದ ಆರಂಭ ಕಳಪೆಯಾಗಿದ್ದರೂ ಶಮೀಮ್ ಹೊಸೈನ್ (33) ಮತ್ತು ಝಾಕರ್ ಅಲಿ (32) ಜೋಇ 56 ರನ್‌ಗಳ ಸೇರಿಸಿ ತಂಡವನ್ನು ಸ್ಥಿರಗೊಳಿಸಿದರು. ಕೊನೆಯ ಹಂತದಲ್ಲಿ ನೂರುಲ್ ಹಸನ್‌ನ ಸಿಕ್ಸರ್‌ಗಳು ಹಾಗೂ ಶೋರಿಫುಲ್ ಇಸ್ಲಾಂನ ನಿರ್ಣಾಯಕ ಬೌಂಡರಿಯಿಂದ 19.1 ಓವರ್‌ಗಳಲ್ಲಿ 150/8 ಸ್ಕೋರ್ ಮಾಡಿ ಗೆಲುವು ಸಾಧಿಸಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande