
ನವದೆಹಲಿ, 31 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ವಿಶೇಷ ಕಾರ್ಯಾಚರಣೆಗಳು, ತನಿಖೆ, ಗುಪ್ತಚರ ಕಾರ್ಯ ಹಾಗೂ ವಿಧಿವಿಜ್ಞಾನ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ದೇಶದಾದ್ಯಂತದ 1,466 ಪೊಲೀಸ್ ಹಾಗೂ ಭದ್ರತಾ ಪಡೆ ಸಿಬ್ಬಂದಿಗೆ ಕೇಂದ್ರ ಸರ್ಕಾರವು “ಕೇಂದ್ರ ಗೃಹ ಸಚಿವರ ದಕ್ಷತೆ ಪದಕ” ಪಟ್ಟಿಯನ್ನು ಪ್ರಕಟಿಸಿದೆ.
ಗೃಹ ಸಚಿವಾಲಯದ ಪ್ರಕಾರ, ವಿಶೇಷ ಕಾರ್ಯಾಚರಣೆ ವಿಭಾಗದಲ್ಲಿ 390 ಅಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇವರಲ್ಲಿ ದೆಹಲಿ ಪೊಲೀಸ್ ಡಿಸಿಪಿ ಪ್ರತೀಕ್ಷಾ ಗೋದಾರ, ಸಿಆರ್‌ಪಿಎಫ್ ಕಮಾಂಡೆಂಟ್ ದೇವೇಂದ್ರ ಸಿಂಗ್ ಕಥಾಯತ್, ಛತ್ತೀಸ್‌ಗಢ ಐಜಿ ಸುಂದರರಾಜ್ ಪಟ್ಟಿಲಿಂಗಂ, ಹಾಗೂ ಜಮ್ಮು–ಕಾಶ್ಮೀರ ಐಜಿ ವಿದ್ಯಾ ಕುಮಾರ್ ಬಿರ್ದಿ ಸೇರಿದ್ದಾರೆ.
ಛತ್ತೀಸ್‌ಗಢ ರಾಜ್ಯವು ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಅಲ್ಲಿನ 200 ಕ್ಕೂ ಹೆಚ್ಚು ಕಾನ್‌ಸ್ಟೆಬಲ್ ಮಟ್ಟದ ಸಿಬ್ಬಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಶೌರ್ಯ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇದೇ ವೇಳೆ, ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ನೀಡಿದ ಅಪಾರ ಕೊಡುಗೆಯ ಹಿನ್ನೆಲೆ 50 ಕ್ಕೂ ಹೆಚ್ಚು ಸಿಆರ್‌ಪಿಎಫ್ ಸಿಬ್ಬಂದಿ ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa