ಭಯೋತ್ಪಾದಕರೊಂದಿಗೆ ಸಂಪರ್ಕ ಶಂಕೆ ; ಧರ್ಮಗುರು ಸೇರಿ ಮೂವರ ಬಂಧನ
ಜೋಧ್‌ಪುರ, 31 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ತನಿಖಾ ಸಂಸ್ಥೆ , ಭಯೋತ್ಪಾದನಾ ನಿಗ್ರಹ ದಳ ಮತ್ತು ಗುಪ್ತಚರ ದಳಗಳ ಸಂಯುಕ್ತ ತಂಡವು ರಾಜಸ್ಥಾನದ ಜೋಧ್‌ಪುರದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಧರ್ಮಗುರು ಸೇರಿ ಮೂವರು ಶಂಕಿತರನ್ನು ಬಂಧಿಸಿದೆ. ಮೂಲಗಳ ಪ್ರಕಾರ, ಚೋಖಾ ಪ್ರದೇಶದ ಮೌಲ
Arrest


ಜೋಧ್‌ಪುರ, 31 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ತನಿಖಾ ಸಂಸ್ಥೆ , ಭಯೋತ್ಪಾದನಾ ನಿಗ್ರಹ ದಳ ಮತ್ತು ಗುಪ್ತಚರ ದಳಗಳ ಸಂಯುಕ್ತ ತಂಡವು ರಾಜಸ್ಥಾನದ ಜೋಧ್‌ಪುರದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಧರ್ಮಗುರು ಸೇರಿ ಮೂವರು ಶಂಕಿತರನ್ನು ಬಂಧಿಸಿದೆ.

ಮೂಲಗಳ ಪ್ರಕಾರ, ಚೋಖಾ ಪ್ರದೇಶದ ಮೌಲ್ವಿ ಅಯೂಬ್ ಸೇರಿದಂತೆ ಪಿಪರ್ ಮತ್ತು ಸ್ಯಾಂಚೋರ್ ಪ್ರದೇಶಗಳಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತರು ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆಯೆಂಬ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು ಸ್ಥಳದಿಂದ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಮೌಲ್ವಿ ಅಯೂಬ್ ಕಳೆದ ದಶಕದಿಂದ ಸ್ಥಳೀಯ ಮದರಸಾದಲ್ಲಿ ಬೋಧನೆ ಮಾಡುತ್ತಿದ್ದು. ಅವರ ಕುಟುಂಬವು ಆರೋಪಗಳನ್ನು ಖಂಡಿಸಿ ಅವರು ನಿರಪರಾಧಿ ಎಂದು ಹೇಳಿದೆ.

ಭದ್ರತಾ ಸಂಸ್ಥೆಗಳು ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ಶಂಕಿತರ ಸಂಪರ್ಕ ಜಾಲದ ಪತ್ತೆಗೆ ತನಿಖೆ ಮುಂದುವರಿಸಿದೆ. ಈ ಬೆಳವಣಿಗೆಯ ಬಳಿಕ ಜೋಧ್‌ಪುರದ ಚೋಖಾ ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande