ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ನಾರಾಯಣ ಹೆಲ್ತ್ ಕೇರ್ ಲಗ್ಗೆ
ಬೆಂಗಳೂರು, 31 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಭಾರತದ ಪ್ರಮುಖ ಆರೋಗ್ಯ ಸಂಸ್ಥೆ ನಾರಾಯಣ ಹೆಲ್ತ್ ಕೇರ್ ಇದೀಗ ಜಾಗತಿಕ ಮಟ್ಟದಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದೆ. ಬ್ರಿಟನ್ ಮೂಲದ ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಜತೆ ಕೈಜೋಡಿಸುವ ಮೂಲಕ ಸಂಸ್ಥೆ ಯುಕೆಯ ಆರೋಗ್ಯ ವಲಯಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ. ಪ
Narayan health


ಬೆಂಗಳೂರು, 31 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತದ ಪ್ರಮುಖ ಆರೋಗ್ಯ ಸಂಸ್ಥೆ ನಾರಾಯಣ ಹೆಲ್ತ್ ಕೇರ್ ಇದೀಗ ಜಾಗತಿಕ ಮಟ್ಟದಲ್ಲೂ ತನ್ನ ಸೇವೆಯನ್ನು ವಿಸ್ತರಿಸಿದೆ. ಬ್ರಿಟನ್ ಮೂಲದ ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಜತೆ ಕೈಜೋಡಿಸುವ ಮೂಲಕ ಸಂಸ್ಥೆ ಯುಕೆಯ ಆರೋಗ್ಯ ವಲಯಕ್ಕೂ ಅಧಿಕೃತವಾಗಿ ಕಾಲಿಟ್ಟಿದೆ.

ಪ್ರಾಕ್ಟೀಸ್ ಪ್ಲಸ್ ಗ್ರೂಪ್ 12 ಆಸ್ಪತ್ರೆಗಳು ಮತ್ತು ಶಸ್ತ್ರಚಿಕಿತ್ಸಾ ಕೇಂದ್ರಗಳನ್ನು ಹೊಂದಿರುವ ಬ್ರಿಟನ್‌ನ ಐದನೇ ಅತಿದೊಡ್ಡ ಖಾಸಗಿ ಆಸ್ಪತ್ರೆಗಳ ಗುಂಪಾಗಿದ್ದು, ವರ್ಷಕ್ಕೆ ಸುಮಾರು 80 ಸಾವಿರ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿದೆ. ನಾರಾಯಣ ಹೆಲ್ತ್ ಕೇರ್ ಜೊತೆಗಿನ ಒಪ್ಪಂದದ ಬಳಿಕ, ಎರಡೂ ಸಂಸ್ಥೆಗಳು ಕೈಗೆಟಕುವ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಮುಂದಾಗಿವೆ.

“ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಕೂಡ ನಮ್ಮಂತೆಯೇ ಮಧ್ಯಮ ವರ್ಗದ ಜನರಿಗೆ ಅಗ್ಗದ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಒದಗಿಸುವ ಗುರಿ ಹೊಂದಿದೆ. ಈ ಸಹಭಾಗಿತ್ವದ ಮೂಲಕ ಹೆಚ್ಚು ಜನರಿಗೆ ಜಾಗತಿಕ ಮಟ್ಟದ ಚಿಕಿತ್ಸೆ ನೀಡುವ ಅವಕಾಶ ದೊರೆಯಲಿದೆ ಎಂದು ನಾರಾಯಣ ಹೆಲ್ತ್ ಕೇರ್ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಡಾ. ಶೆಟ್ಟಿ ಮತ್ತು ನಾರಾಯಣ ಹೆಲ್ತ್ ಕೇರ್ ವಿಶ್ವಾಸಾರ್ಹ ಸೇವೆಗಾಗಿ ಹೆಸರುವಾಸಿಯಾಗಿದ್ದಾರೆ. ಅವರ ಜೊತೆಗೆ ಕೆಲಸ ಮಾಡುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮಾನದಂಡ ಸೃಷ್ಟಿಯಾಗಲಿದೆ ಎಂದು ಪ್ರಾಕ್ಟೀಸ್ ಪ್ಲಸ್ ಗ್ರೂಪ್ ಸಿಇಒ ಜಿಮ್ ಈಸ್ಟನ್ ಹೇಳಿದ್ದಾರೆ

ಡಾ. ದೇವಿ ಶೆಟ್ಟಿ ಸ್ಥಾಪಿಸಿದ ನಾರಾಯಣ ಹೆಲ್ತ್ ಕೇರ್ ಬೆಂಗಳೂರಿನಲ್ಲಿದೆ. ಭಾರತ ಮತ್ತು ಕೆರಿಬಿಯನ್ ಪ್ರದೇಶಗಳಲ್ಲಿ 18,800 ಕ್ಕೂ ಹೆಚ್ಚು ವೃತ್ತಿಪರರು, 3,800 ಕ್ಕೂ ಹೆಚ್ಚು ವೈದ್ಯರು ಸೇರಿದಂತೆ, ಬಹುಮುಖ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದೆ. ಸಂಸ್ಥೆಯ ಅಂಗಸಂಸ್ಥೆಗಳಾದ ನಾರಾಯಣ ಒನ್ ಹೆಲ್ತ್ ಮತ್ತು ನಾರಾಯಣ ಹೆಲ್ತ್ ಇನ್ಶೂರೆನ್ಸ್ ಮೂಲಕವೂ ವಿವಿಧ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದೆ.

ಈ ಹೊಸ ಒಪ್ಪಂದದೊಂದಿಗೆ, ನಾರಾಯಣ ಹೆಲ್ತ್ ಕೇರ್ ಭಾರತದಿಂದ ಜಾಗತಿಕ ಮಟ್ಟದ ಆರೋಗ್ಯ ಸೇವಾ ಪೂರೈಕೆದಾರರ ಪಟ್ಟಿಗೆ ಅಧಿಕೃತವಾಗಿ ಸೇರಿದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande