ಬಿಹಾರ ಚುನಾವಣೆ ; ಎನ್‌ಡಿಎ ಪ್ರಣಾಳಿಕೆ ಬಿಡುಗಡೆ
ಪಾಟ್ನಾ, 31 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು. ಪಾಟ್ನಾದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಮೈತ್ರಿಕೂಟದ ಪ್ರಮ
Manifest


ಪಾಟ್ನಾ, 31 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಇಂದು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.

ಪಾಟ್ನಾದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಮೈತ್ರಿಕೂಟದ ಪ್ರಮುಖ ನಾಯಕರು ಭಾಗವಹಿಸಿದರು.

ಪ್ರಣಾಳಿಕೆ ಸಮೃದ್ಧ, ಸ್ವಾವಲಂಬಿ ಮತ್ತು ಆಧುನಿಕ ಬಿಹಾರ ನಿರ್ಮಾಣದ ಭರವಸೆಯೊಂದಿಗೆ ಬಿಡುಗಡೆಗೊಂಡಿದ್ದು, ಉದ್ಯೋಗ, ಮಹಿಳಾ ಸಬಲೀಕರಣ, ಕೃಷಿ, ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ.

ಒಂದು ಕೋಟಿ ಉದ್ಯೋಗಾವಕಾಶ ಸೃಷ್ಟಿ, ಮಹಿಳೆಯರಿಗೆ ₹2 ಲಕ್ಷ ಸಹಾಯಧನ ಹಾಗೂ “ಲಖ್ಪತಿ ದೀದಿ” ಯೋಜನೆ ಜಾರಿಗೆ ತರಲಾಗುವುದು. ರೈತರಿಗೆ ವರ್ಷಕ್ಕೆ ₹9,000 ನೆರವು ನೀಡುವ “ಕರ್ಪೂರಿ ಠಾಕೂರ್ ಕಿಸಾನ್ ಸಮ್ಮಾನ್ ನಿಧಿ” ಘೋಷಿಸಲಾಗಿದೆ.

ಮೂಲಸೌಕರ್ಯ ವಿಭಾಗದಲ್ಲಿ 100 ಎಕ್ಸ್‌ಪ್ರೆಸ್‌ವೇ, ನಾಲ್ಕು ಮೆಟ್ರೋ ಯೋಜನೆ, ಮತ್ತು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣದ ಯೋಜನೆ ಇದೆ. ಕೈಗಾರಿಕಾ ಮಿಷನ್ ಅಡಿಯಲ್ಲಿ ₹1 ಲಕ್ಷ ಕೋಟಿ ಹೂಡಿಕೆ, 10 ಕೈಗಾರಿಕಾ ಪಾರ್ಕ್ ಹಾಗೂ “ಮೇಡ್ ಇನ್ ಬಿಹಾರ” ಅಭಿಯಾನ ಪ್ರಸ್ತಾಪಗೊಂಡಿದೆ.

ಬಡವರಿಗೆ ಉಚಿತ ಪಡಿತರ, ವಿದ್ಯುತ್, ಚಿಕಿತ್ಸೆ ಮತ್ತು 50 ಲಕ್ಷ ಮನೆಗಳ ಭರವಸೆ ನೀಡಲಾಗಿದ್ದು, ಶಿಕ್ಷಣ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೂ ವಿಶೇಷ ಒತ್ತು ನೀಡಲಾಗಿದೆ.

ಎನ್‌ಡಿಎ ಮೈತ್ರಿಕೂಟವು ಬಿಹಾರವನ್ನು ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಆರ್ಥಿಕ ಕೇಂದ್ರವಾಗಿ ರೂಪಾಂತರಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande