ನವದೆಹಲಿ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ರಾತ್ರಿ ಛತ್ತಿಸಗಢಕ್ಕೆ ತೆರಳಲಿದ್ದು, ರಾಯ್‌ಪುರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ನಾಳೆ 11 ಗಂಟೆಗೆ ರಾಯ್‌ಪುರದಿಂದ ಜಗದಲ್‌ಪುರಕ್ಕೆ ತೆರಳುವ ಶಾ, ಮಧ್ಯಾಹ್ನ 12:10ಕ್ಕೆ ಮಾತಾ ದಂತೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸ್ವದೇಶಿ ಮೇಳದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮಾಂಝಿ ಮುರಿಯ ಪುರೋಹಿತರೊಂದಿಗೆ ಚರ್ಚೆ ನಡೆಸುವರು.
ಮಧ್ಯಾಹ್ನ 12:35ಕ್ಕೆ ಸಿರ್ಹಸರ್ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa