ರಾಯಚೂರು, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಸುಭೋದ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲೆ ಹಾಗೂ ಮಹತ್ವಾಕಾಂಕ್ಷಿ ತಾಲೂಕು ಪ್ರಗತಿ ಪರಿಶೀಲನಾ ಸಭೆಯು ಅಕ್ಟೋಬರ್ 2ರಂದು ನಡೆಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಧ್ಯಾಹ್ನ ಆರಂಭಗೊAಡ ಸಭೆಯು ಸಂಜೆ 7 ಗಂಟೆವರೆಗೆ ಸುಧೀರ್ಘ ಅವಧಿವರೆಗೆ ನಡೆಯಿತು. ಈ ವೇಳೆ ಸುಬೋಧ್ ಯಾದವ್ ಅವರು, ರಾಯಚೂರು ಜಿಲ್ಲೆಯ ನೀತಿ ಆಯೋಗದ ಸಂಬAಧಪಟ್ಟ ಇಲಾಖೆಗಳ ಪ್ರಮುಖ ಕಾರ್ಯಕ್ಷಮತೆಯ ಸೂಚಕಗಳ ಬಗ್ಗೆ ಚರ್ಚಿಸಿದರು. ಮಹತ್ವಾಕಾಂಕ್ಷಿ ಯೋಜನೆಗಳು ಮತ್ತು ಇತರೆ ವಿಷಯಗಳ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಮತ್ತು ದಾಖಲೆಗಳ ಬಗ್ಗೆ ಸವಿಸ್ತಾರವಾಗಿ ಪರಿಶೀಲಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಪರಿಶೀಲಿಸಿದ ಅಪರ ಕಾರ್ಯದರ್ಶಿಗಳು, ಪ್ರತಿಯೊಂದು ಶಾಲೆಯಲ್ಲಿ ಸಮರ್ಪಕ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಮತ್ತು ಶೌಚಾಲಯಗಳನ್ನು ಸುಸ್ಥಿತಿಯಲ್ಲಿಟ್ಟು ನಿರ್ವಹಣೆ ಮಾಡುವ ಬಗ್ಗೆ ಸಲಹೆ ಮಾಡಿದರು.
ಸಾಮಾನ್ಯ ಜನತೆಗೆ ಇನ್ನು ಸಹ ಅರಿವಿನ ಕೊರತೆಯಿದೆ. ಹಾಗಾಗಿ ಆರೋಗ್ಯ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ರೂಪಿಸಬೇಕು. ತಾಯಿ ಮತ್ತು ಮಗುವಿನ ಮರಣ ತಡೆಗೆ ಸಂಬAಧಿಸಿದAತೆ ಆಸ್ಪತ್ರೆಯಲ್ಲಿಯೇ ಹೆರಿಗೆ ಆಗುವಂತೆ ತಿಳಿಸಬೇಕು.
ರೈತರು ಬರೀ ಲಾಭದ ಬಗ್ಗೆ ಯೋಚಿಸದೇ ಆರೋಗ್ಯ ಮತ್ತು ಮಣ್ಣಿನ ಸಮತೋಲನ ಕಾಯ್ದುಕೊಳ್ಳಲು ಮಿಶ್ರ ಬೆಳೆಗಳನ್ನು ತೆಗೆಯಲು ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ನಡೆಸಿ ಮಣ್ಣಿನ ಗುಣಧರ್ಮ ಆಧರಿಸಿ ಕೃಷಿ ಮಾಡಿದಾಗ ಉತ್ತಮ ಫಸಲು ಬರಲು ಸಾಧ್ಯವಾಗುತ್ತದೆ. ಈ ಮೂಲಕ ಜಿಲ್ಲೆಯ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದೆ. ಈ ದಿಶೆಯಲ್ಲಿ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ ವಿತರಣೆ ಆಗಬೇಕು. ಇಂತಹ ಉಪಕ್ರಮಗಳಿಗೆ ಕೃಷಿ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಪರಿಶೀಲಿಸಿದ ಅಪರ ಕಾರ್ಯದರ್ಶಿಗಳು, ವಿಶೇಷವಾಗಿ ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ಕೊಡುವುದರ ಬಗ್ಗೆ ಕೇಳಿದರು. ಅಂಗನವಾಡಿಗಳಲ್ಲಿ ಗರ್ಭೀಣಿಯರಿಗೆ ಪೌಷ್ಠಿಕ ಆಹಾರ ಕೊಡಲಾಗುತ್ತಿದೆ ಎಂಬುದರ ಬಗ್ಗೆ ಗ್ರಾಮೀಣ ಮಹಿಳೆಯರಿಗೆ ತಿಳಿವಳಿಕೆ ಇದೆಯಾ? ಅವರು ಅಂಗನವಾಡಿಗಳಿಗೆ ಹಾಜರಾಗದೇ ಇದ್ದಲ್ಲಿ ನೀವು ಅವರ ಮನೆಗಳಿಗೆ ತೆರಳಿ ಆಹಾರ ಕೊಡ್ತೀರಾ? ಎಂದು ಅಧಿಕಾರಿಗಳೊಂದಿಗೆ ವಿಚಾರಿಸಿ ಈ ಕಾರ್ಯಕ್ರಮದ ಬಗ್ಗೆ ಒತ್ತು ಕೊಡಲು ಸಲಹೆ ಮಾಡಿದರು.
ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲಿಸಿದ ಅವರು, ಬ್ಯಾಂಕುಗಳಲ್ಲಿ ಮುದ್ರಾ ಲೋನ ಸರಿಯಾಗಿ ಸಿಗುತ್ತಿದೆಯಾ ಎಂದು ಕೇಳಿದರು. ಲೋಕೋಪಯೋಗಿ ಇಲಾಖೆಯಡಿಯ ರಸ್ತೆಗಳ ಸ್ಥಿತಿಗತಿ, ರಸ್ತೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಚರ್ಚಿಸಿದರು. ಕೇಂದ್ರ ಸರ್ಕಾರದ ವಸತಿ ಯೋಜನೆಗಳ ಅನುಷ್ಠಾನ? ಪ್ರಗತಿಯ ಬಗ್ಗೆ ಕೇಳಿದರು.
ಅಧಿಕಾರಿಗಳಿಗೆ ಸೂಚನೆ: ಆಯಾ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ತಮ್ಮ ತಮ್ಮ ಇಲಾಖೆಯ ನಾನಾ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿ ಆ ಪ್ರಗತಿ ಮಾಹಿತಿಯನ್ನು ಆ್ಯಸ್ಪೆöÊರೇಷನಲ್ ಆನ್‌ಲೈನ್ ಆ್ಯಪನಲ್ಲಿ ಪ್ರತಿ ತಿಂಗಳು ತಪ್ಪದೇ ಎಂಟ್ರಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.
ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಉತ್ತಮ ಪ್ರಗತಿ ತೋರಿದ ಬಗ್ಗೆ ಆ್ಯಪನಲ್ಲಿ ಎಂಟ್ರಿ ಮಾಡಿದಲ್ಲಿ ಆಲ್ ಇಂಡಿಯಾ ಲೇವೆಲ್‌ನ ರ‍್ಯಾಂಕ್ ಜನರೇಟಾಗಲಿದೆ. ಹೀಗೆ ರ‍್ಯಾಂಕ್ ಬಂದದ್ದರಿAದಾಗಿ ಈಗಾಗಲೇ ಮಸ್ಕಿಗೆ ಎರಡೂವರೆ ಕೋಟಿ ರೂ. ಇನ್ಸೆಂಟಿವ್ ಬಂದಿದೆ. ಕೃಷಿ ಇಲಾಖೆಗೆ ಎರಡು ಬಾರಿ ಇನ್ಸೆಂಟಿವ್ ಬಂದಿದೆ. ಈ ವರ್ಷ ಕಲಬುರಗಿ ಜಿಲ್ಲೆಗೆ ಇನ್ಸೆಂಟಿವ್ ಲಭಿಸಿದೆ. ಸಿರವಾರಕ್ಕೆ ಅತ್ಯುತ್ತಮ ತಾಲೂಕು ಪಂಚಾಯಿತಿ ಎನ್ನುವ ಪುರಸ್ಕಾರ ಸಿಕ್ಕಿದೆ. ಸರ್ಕಾರದ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಹೆಚ್ಚಿನ ರೀತಿಯಲ್ಲಿ ಮುತುವರ್ಜಿ ವಹಿಸಿದಲ್ಲಿ ರಾಯಚೂರು ಜಿಲ್ಲೆಗೆ ರ‍್ಯಾಂಕಿ0ಗ್‌ನಲ್ಲಿ ಉತ್ತಮ ಸ್ಥಾನ ದೊರೆತು ಇನ್ಸೆಂಟಿವ್ ಅಥವಾ ಬಹುಮಾನ ಬರಲಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ ಎಂದು ಅವರು ಸಲಹೆ ಮಾಡಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗಿ: ಕೃಷಿ, ಆಹಾರ, ಪಶುಪಾಲನೆ, ಶಾಲಾ ಶಿಕ್ಷಣ, ತೋಟಗಾರಿಕೆ, ಆರೋಗ್ಯ ಇಲಾಖೆ, ಅಂತರ್ಜಲ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಭಾರತೀಯ ದೂರ ಸಂಚಾರ ನಿಗಮ, ಪಿಆರ್‌ಇಡಿ, ಪಿಎಂಜಿಎಸ್‌ವೈ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಲೀಡ್ ಬ್ಯಾಂಕ್, ಜಿಲ್ಲಾ ವಯಸ್ಸರ ಶಿಕ್ಷಣ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಅಧಿಕಾರಿಗಳು, ಎನ್‌ಆರ್‌ಎನ್ ಮತ್ತು ಎನ್‌ಯುಎಲ್‌ಎಮ್ ಹಾಗೂ ಜಿಲ್ಲೆಯಲ್ಲಿ ಸರ್ಕಾರಿ ಇಲಾಖೆಗಳ ಸಹಭಾಗೀತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಎನ್‌ಜಿಓಗಳು ಪ್ರತಿನಿಧಿಗಳು ಭಾಗಿಯಾಗಿದ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಪಾಲಿಕೆಯು ಆಯುಕ್ತರಾದ ಜುಬಿನ್ ಮೊಹಪಾತ್ರ, ಪ್ರೊಬೆಷನರಿ ಐಎಎಸ್ ಅಧಿಕಾರಿ ಪುರುರಾಜ್ ಸೋಲಂಕಿ, ಸಂಬ0ಧಪಟ್ಟ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಹಾಗೂ ಮಹತ್ವಕಾಂಕ್ಷಿ ಜಿಲ್ಲಾ ಫೆಲೋಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್