ಬೆಂಗಳೂರು, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸರ್ಕಾರವು ಪ್ರಜಾಪ್ರಭುತ್ವದ ಆಶಯವನ್ನು ಬದಿಗೊತ್ತಿ ಸರ್ವಾಧಿಕಾರದ ಶಿಖರವನ್ನೇರುತ್ತದೆಯೋ, ಹಕ್ಕುಗಳನ್ನು ಕಸಿಯುವ ಪ್ರಯತ್ನ ಮಾಡುತ್ತದೆಯೋ ಆಗ ಜನರ ಸಹನೆಯ ಕಟ್ಟೆ ಒಡೆಯುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಆರ್ ಎಸ್ಎಸ್ ಮುಖ್ಯಸ್ಥ ಡಾ.ಮೋಹನ ಭಾಗವತ್ ಅವರ ಹೇಳಿಕೆ ಉಲ್ಲೇಖಿಸಿ ತಮ್ಮ ಸಂದೇಶ ಬಿಡುಗಡೆ ಮಾಡಿರುವ ಅವರು, ಕೇಂದ್ರ ಸರ್ಕಾರದ ನಡವಳಿಕೆಯಿಂದ ಆರ್ ಎಸ್ ಎಸ್ ನವರಿಗೆ ಜನರು ದಂಗೆ ಏಳಬಹುದಾದ ಭಯ ಶುರುವಾಗಿರುವುದರಲ್ಲಿ ಆಶ್ಚರ್ಯವಿಲ್ಲ ಎಂದಿದ್ದಾರೆ.
ಜಗತ್ತಿನ ಇತಿಹಾಸದ ಪುಟಗಳನ್ನು ತೆಗೆದು ನೋಡಿದರೆ ಪ್ರಜೆಗಳ ದಂಗೆಯು ಸರ್ವಾಧಿಕಾರದ ವಿರುದ್ಧವಾಗಿ, ಪ್ರಜಾಪ್ರಭುತ್ವವನ್ನು ಸ್ಥಾಪಿಸುವುದಕ್ಕಾಗಿಯೇ ನಡೆದಿದೆ. ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುತ್ತಿರುವ ಕೇಂದ್ರ ಸರ್ಕಾರದ ನಡೆಗಳ ಬಗ್ಗೆ ರಾಹುಲ್ ಗಾಂಧಿಯವರು ಈ ಮಾತನ್ನು ಹೇಳಿದರೆ ಅವರನ್ನು ದೇಶದ್ರೋಹಿ ಎನ್ನುವ ಬಿಜೆಪಿಯವರು ಈಗ ಮೋಹನ್ ಭಾಗವತ್ ಅವರನ್ನು ಏನೆಂದು ಕರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa