ಸೂರತ್ ಹೈ-ಸ್ಪೀಡ್ ರೈಲು ಯೋಜನೆ ಸ್ಥಳಕ್ಕೆ ಭಾರತ-ಜಪಾನ್ ಸಚಿವರ ಭೇಟಿ
ಸೂರತ್, 03 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಜಪಾನ್‌ನ ಭೂ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವ ಹಿರೋಮಾಸಾ ನಕಾನೊ ಅವರು ಇಂದು ಸೂರತ್ ಹೈ-ಸ್ಪೀಡ್ ರೈಲು ಯೋಜನೆ ಸ್ಥಳಕ್ಕೆ ಭೇಟಿ ನೀಡಿದರು. ಭೇಟಿಯ ಸಂದರ್ಭದಲ್ಲಿ ಇಬ್ಬರು ಸಚಿವರು ಟ್ರ್ಯಾಕ್ ಸ್ಲ್ಯಾ
Visit


ಸೂರತ್, 03 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಜಪಾನ್‌ನ ಭೂ, ಮೂಲಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವ ಹಿರೋಮಾಸಾ ನಕಾನೊ ಅವರು ಇಂದು ಸೂರತ್ ಹೈ-ಸ್ಪೀಡ್ ರೈಲು ಯೋಜನೆ ಸ್ಥಳಕ್ಕೆ ಭೇಟಿ ನೀಡಿದರು.

ಭೇಟಿಯ ಸಂದರ್ಭದಲ್ಲಿ ಇಬ್ಬರು ಸಚಿವರು ಟ್ರ್ಯಾಕ್ ಸ್ಲ್ಯಾಬ್ ಹಾಕುವ ಕಾರು ಹಾಗೂ ಟ್ರ್ಯಾಕ್ ಸ್ಲ್ಯಾಬ್ ಹೊಂದಾಣಿಕೆ ಸೌಲಭ್ಯವನ್ನು ಪರಿಶೀಲಿಸಿದರು. ನಿರ್ಮಾಣದ ಗುಣಮಟ್ಟ ಮತ್ತು ವೇಗದ ಬಗ್ಗೆ ತೃಪ್ತಿ ವ್ಯಕ್ತಪಡಿಸಿ, ಯೋಜನೆಯ ಪ್ರಗತಿಯನ್ನು ಶ್ಲಾಘಿಸಿದರು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಭಾರತದ ಮೊದಲ ಹೈ-ಸ್ಪೀಡ್ ರೈಲು ಯೋಜನೆಯ ಯಶಸ್ವಿ ನಿರ್ವಹಣೆಯಲ್ಲಿ ಭಾರತ-ಜಪಾನ್ ಸಹಕಾರದ ಬಲವಾದ ನಿದರ್ಶನವೆಂದು ಈ ಭೇಟಿ ಪರಿಗಣಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande