ಬಳ್ಳಾರಿ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : `ಗಲ್ರ್ಸ್ ಇಸ್ಲಾಮಿಕ್ ಆರ್ಗನೈಜೇಷನ್ `ಕರ್ನಾಟಕವು ಅರಿವು : ಮಾನವೀಯತೆ ಮರು ಸ್ಥಾಪನೆ' ಶೀರ್ಷಿಕೆ ಅಡಿಯಲ್ಲಿ ಅಕ್ಟೋಬರ್ 02 ರಿಂದ 12ರವರೆಗೆ ರಾಜ್ಯಾದ್ಯಂತ `ಮಾನವೀಯತೆಯ ಮರು ಸ್ಥಾಪನೆ'ಯ ಅಭಿಯಾನವನ್ನು ಹಮ್ಮಿಕೊಂಡಿದೆ.
ಬಳ್ಳಾರಿ ಸ್ಥಾನಿಕ ಘಟಕದ ಅಧ್ಯಕ್ಷೆ ಜವೇರಿಯ ಅವರು ಸುದ್ದಿಗಾರರಿಗೆ ಶುಕ್ರವಾರ ಈ ಮಾಹಿತಿ ನೀಡಿದ್ದು, ವಿಶ್ವದ ಕೆಲವು ಸಮುದಾಯಗಳು ಅತಿಯಾದ ಆಸಹಿಷ್ಣುತೆ, ಉದ್ದೇಶ ಪೂರ್ವಕ ಹಿಂಸೆ ಮತ್ತು ಹೆಚ್ಚಿನ ದೃವೀಕರಣ ಸಮಸ್ಯೆಯನ್ನು ಎದುರಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಭಯವನ್ನು ವೈಭವೀಕರಿಸಿ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವ ಮೂಲಕ ಸಮುದಾಯಗಳ ಮಧ್ಯೆ ಬಿಕ್ಕಟ್ಟುಗಳನ್ನು ಮೂಡಿಸುತ್ತಿವೆ. ಈ ಸಂದರ್ಭದಲ್ಲಿ ವೈಯಕ್ತಿಕ ಅಭಿವೃದ್ಧಿ ಮತ್ತು ಸಾಮೂಹಿಕ ಬದಲಾವಣೆಗೆ
`ಗಲ್ರ್ಸ್ ಇಸ್ಲಾಮಿಕ್ ಆರ್ಗನೈಜೇಷನ್' ರಾಜ್ಯಾದ್ಯಂತ ಸೌಹಾರ್ದತೆ, ಸಹಬಾಳ್ವೆ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅರಿವು ಮೂಡಿಸುವ ಅಭಿಯಾನವನ್ನು ನಡೆಸುತ್ತಿದೆ ಎಂದರು.
ಅಭಿಯಾನದ ಅಂಗವಾಗಿ ಶಾಲಾ - ಕಾಲೇಜುಗಳಲ್ಲಿ ಸ್ಪರ್ಧೆಗಳು, ಉಪನ್ಯಾಸಗಳು, ವೈಯಕ್ತಿಕ ಮತ್ತು ಸಾಮೂಹಿಕ ಭೇಟಿಗಳು, ಅಂತರ್ ಧರ್ಮೀಯರ ಸಂವಾದಗಳು, ಮಾನಸಿಕ ಆರೋಗ್ಯ ಕಾರ್ಯಗಾರಗಳು, ಕಲೆ, ಕವನ ಮತ್ತು ಪೆÇೀಸ್ಟರ್ ಸ್ಪರ್ಧೆಗಳು, ರಿಲೆ ಮತ್ತು ಜಾಗೃತೆ ವಿಡಿಯೋಗಳು, ಪುಸ್ತಕ, ಕರಪತ್ರಿಕೆಗಳ ವಿತರಣೆ, ಮನೆ ಮನೆ ಭೇಟಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ದಾನಿಯ, ಬಿಲ್ಕಿಸ್, ರೋಯಾ, ಸಮಿರಾ, ಮೇಹ ಜಬೀನ್, ಪರ್ವಿನ್, ಶಾಹೀನ್, ನಾಜೀನ್ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್