ಪ್ಯಾರಿಸ್, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಯೋಜನೆಯನ್ನು ಹಮಾಸ್ ಒಪ್ಪಿಕೊಳ್ಳುವಂತೆ ಈಜಿಪ್ಟ್ ಕತಾರ್, ಟರ್ಕಿಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ವಿದೇಶಾಂಗ ಸಚಿವ ಬದರ್ ಅಬ್ದೆಲಾಟಿ ತಿಳಿಸಿದ್ದಾರೆ.
20 ಅಂಶಗಳ ಯೋಜನೆಯಲ್ಲಿ ತಕ್ಷಣದ ಕದನ ವಿರಾಮ, ಒತ್ತೆಯಾಳು, ಬಂಧಿತರ ವಿನಿಮಯ, ಗಾಜಾದಿಂದ ಇಸ್ರೇಲ್ ಪಡೆಗಳನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವಿಕೆ, ಹಮಾಸ್‌ನ ನಿಶಸ್ತ್ರೀಕರಣ ಸೇರಿದೆ.
ಹಮಾಸ್‌ಗೆ ಒಪ್ಪಿಗೆ ನೀಡಲು ಟ್ರಂಪ್ 3–4 ದಿನಗಳ ಕಾಲಾವಕಾಶ ನೀಡಿದ್ದಾರೆ.
ಗಾಜಾದ ಹತ್ಯಾಕಾಂಡವು ಸೇಡಿನ ಹಾದಿ ಮೀರಿದೆ, ಇದು ಜನಾಂಗೀಯ ಶುದ್ಧೀಕರಣವಾಗಿದೆ. ಪ್ಯಾಲೆಸ್ಟೀನಿಯನ್ನರ ಬಲವಂತದ ಸ್ಥಳಾಂತರವನ್ನು ಈಜಿಪ್ಟ್ ಎಂದಿಗೂ ಒಪ್ಪುವುದಿಲ್ಲ, ಎಂದು ಅಬ್ದೆಲಾಟಿ ಎಚ್ಚರಿಸಿದರು.
ಪ್ಯಾಲೆಸ್ಟೀನಿಯನ್ ಆರೋಗ್ಯ ಇಲಾಖೆಯ ಪ್ರಕಾರ, ಇಸ್ರೇಲ್ ಕ್ರಮಗಳಿಂದ ಗಾಜಾದಲ್ಲಿ 66,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa