ಶಾಸ್ತ್ರೀಯ ಸಂಗೀತ ಮಾಂತ್ರಿಕ ಪಂ. ಛನ್ನುಲಾಲ್ ಮಿಶ್ರಾ ಅಂತ್ಯಕ್ರಿಯೆ
ವಾರಣಾಸಿ, 03 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಪದ್ಮವಿಭೂಷಣ ಪಂಡಿತ್ ಛನ್ನುಲಾಲ್ ಮಿಶ್ರಾ ಅವರ ಅಂತಿಮ ಸಂಸ್ಕಾರವನ್ನು ಗುರುವಾರ ಸಂಜೆ ಕಾಶಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅವರ ಮೊಮ್ಮಗ ರಾಹುಲ್ ಮಿಶ್ರಾ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು. ಬೆಳಿಗ್ಗೆ 4:30ಕ್ಕೆ
Funeral


ವಾರಣಾಸಿ, 03 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಪದ್ಮವಿಭೂಷಣ ಪಂಡಿತ್ ಛನ್ನುಲಾಲ್ ಮಿಶ್ರಾ ಅವರ ಅಂತಿಮ ಸಂಸ್ಕಾರವನ್ನು ಗುರುವಾರ ಸಂಜೆ ಕಾಶಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅವರ ಮೊಮ್ಮಗ ರಾಹುಲ್ ಮಿಶ್ರಾ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.

ಬೆಳಿಗ್ಗೆ 4:30ಕ್ಕೆ ಮಿರ್ಜಾಪುರದಲ್ಲಿರುವ ಪುತ್ರಿ ಪ್ರೊ. ನಮ್ರತಾ ಮಿಶ್ರಾ ಅವರ ನಿವಾಸದಲ್ಲಿ ಪಂಡಿತ್‌ ನಿಧನರಾದರು. ಬಳಿಕ ಅವರ ಪಾರ್ಥಿವ ಶರೀರವನ್ನು ವಾರಣಾಸಿಯ ಬಾಡಿ ಗಬಿ ನಿವಾಸದಲ್ಲಿ ಅಂತಿಮ‌ ದರ್ಶನಕ್ಕೆ ಇಡಲಾಗಿತ್ತು, ಅಲ್ಲಿ ಸಾವಿರಾರು , ಶಿಷ್ಯರು ಹಾಗೂ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಅಂತಿಮ ವಿಧಿವಿಧಾನಗಳಲ್ಲಿ ಮೇಯರ್ ಅಶೋಕ್ ತಿವಾರಿ, ಮಾಜಿ ಮೇಯರ್ ರಾಮಗೋಪಾಲ್ ಮೊಹ್ಲೆ, ಶಾಸಕ ಡಾ. ನೀಲಕಂಠ ತಿವಾರಿ, ಅವಧೇಶ್ ಸಿಂಗ್, ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ಅಜಂಗಢ ಮೂಲದ ಪಂಡಿತ್ ಮಿಶ್ರಾ ಬನಾರಸ್ ಹಾಗೂ ಕಿರಾನಾ ಘರಾನಾಗಳ ಸಂಗಮವಾಗಿದ್ದು, ಠುಮ್ರಿ, ದಾದ್ರಾ, ಚೈತಿ, ಕಜ್ರಿ ಮತ್ತು ಭಜನ್‌ಗಳಲ್ಲಿ ಅಪಾರ ಖ್ಯಾತಿ ಗಳಿಸಿದ್ದರು. 2000ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಪದ್ಮಭೂಷಣ ಮತ್ತು 2020ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande