ಅಫ್ಘಾನಿಸ್ತಾನ ವಿರುದ್ದ ಬಾಂಗ್ಲಾದೇಶಕ್ಕೆ ರೋಚಕ ಜಯ
ಶಾರ್ಜಾ, 03 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮೂರು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಅಫ್ಘಾನಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿ 1-0 ಮುನ್ನಡೆ ಸಾಧಿಸಿದೆ. ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 151/9 ರನ್ ಗಳಿಸಿತು. ರಹ್ಮಾನಲ
T20


ಶಾರ್ಜಾ, 03 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮೂರು ಪಂದ್ಯಗಳ ಟಿ20 ಅಂತರರಾಷ್ಟ್ರೀಯ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಅಫ್ಘಾನಿಸ್ತಾನವನ್ನು 4 ವಿಕೆಟ್‌ಗಳಿಂದ ಸೋಲಿಸಿ 1-0 ಮುನ್ನಡೆ ಸಾಧಿಸಿದೆ.

ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 151/9 ರನ್ ಗಳಿಸಿತು. ರಹ್ಮಾನಲ್ಲಾ ಗುರ್ಬಾಜ್ (40) ಮತ್ತು ಮೊಹಮ್ಮದ್ ನಬಿ (38) ಉತ್ತಮ ಆಟ ತೋರಿದರು. ರಿಶಾತ್ ಹೊಸೈನ್ 2 ವಿಕೆಟ್ ಪಡೆದರು.

ಪ್ರತಿಯಾಗಿ ಬಾಂಗ್ಲಾದೇಶ ಆರಂಭಿಕ ಜೋಡಿ ತನ್ಜೀದ್ ಹಸನ್ (54) ಹಾಗೂ ಪರ್ವೇಜ್ ಹೊಸೈನ್ ಇಮ್ರಾನ್ (51) ಶತಕದ ಜೊತೆಯಾಟವಾಡಿ ಗೆಲುವಿನ ಭದ್ರ ನೆಲೆ ನಿರ್ಮಿಸಿದರು. ಆದರೆ, ರಶೀದ್ ಖಾನ್ (4 ವಿಕೆಟ್) ಮಾರಕ ಬೌಲಿಂಗ್ ಮಾಡಿ ಪಂದ್ಯವನ್ನು ರೋಚಕವನ್ನಾಗಿಸಿದರು.

ಒಮ್ಮೆ 109/0 ಇದ್ದ ಬಾಂಗ್ಲಾದೇಶ 118/6ಕ್ಕೆ ಕುಸಿದರೂ, ನೂರುಲ್ ಹಸನ್ ಮತ್ತು ರಿಶಾತ್ ಹೊಸೈನ್ ಜೋಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನೂರುಲ್ ಹಸನ್ 19ನೇ ಓವರ್‌ನಲ್ಲಿ ಸತತ ಎರಡು ಸಿಕ್ಸರ್‌ಗಳನ್ನು ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande