ಸಮೀಕ್ಷೆ ನಮ್ಮ ಸರ್ಕಾರದ ಮೈಲುಗಲ್ಲು : ಶಾಸಕ ನಾರಾ ಭರತರೆಡ್ಡಿ
ಬಳ್ಳಾರಿ, 20 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ- ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದ ನಮ್ಮ ಸರ್ಕಾರ ನಡೆಸುತ್ತಿರುವ ಜಾತಿ ಆಧಾರಿತ ಹಿಂದುಗಳಿದ ವರ್ಗಗಳ ಶೈಕ್ಷಣಿಕ - ಆರ್ಥಿಕ - ಸಾಮಾಜಿಕ ಸಮೀಕ್ಷೆ ನಮ್ಮ ಸರ್ಕಾರದ ಸಾಧನೆಗಳಲ್ಲಿಯೇ ಪ್ರಮುಖ ಮೈಲುಗಲ್ಲು ಎಂ
ಸಮೀಕ್ಷೆ ನಮ್ಮ ಸರ್ಕಾರದ ಮೈಲುಗಲ್ಲು: ಶಾಸಕ ನಾರಾ ಭರತರೆಡ್ಡಿ


ಸಮೀಕ್ಷೆ ನಮ್ಮ ಸರ್ಕಾರದ ಮೈಲುಗಲ್ಲು: ಶಾಸಕ ನಾರಾ ಭರತರೆಡ್ಡಿ


ಬಳ್ಳಾರಿ, 20 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ- ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಾರಥ್ಯದ ನಮ್ಮ ಸರ್ಕಾರ ನಡೆಸುತ್ತಿರುವ ಜಾತಿ ಆಧಾರಿತ ಹಿಂದುಗಳಿದ ವರ್ಗಗಳ ಶೈಕ್ಷಣಿಕ - ಆರ್ಥಿಕ - ಸಾಮಾಜಿಕ ಸಮೀಕ್ಷೆ ನಮ್ಮ ಸರ್ಕಾರದ ಸಾಧನೆಗಳಲ್ಲಿಯೇ ಪ್ರಮುಖ ಮೈಲುಗಲ್ಲು ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತರೆಡ್ಡಿ ಅವರು ತಿಳಿಸಿದ್ದಾರೆ.

ಬಳ್ಳಾರಿ ನಗರದ ನೆಹರು ಕಾಲೊನಿಯಲ್ಲಿರುವ ಅವರ ಮನೆಯಲ್ಲಿ ಸೋಮವಾರ ನಡೆದ ಸಮೀಕ್ಷೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೋಮವಾರ ನನ್ನ ಮನೆಗೆ ಗಣತಿಗಾರರು ಬಂದಾಗ, ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಂಡಿರುವೆ. ಗಣತಿದಾರರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಸಮೀಕ್ಷಾ ಮಾಹಿತಿಯ ಘೊಷಣಾ ಪತ್ರಕ್ಕೂ ಸಹಿ ಹಾಕಿದ್ದೇನೆ ಎಂದರು.

ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಸಿಗುವ ದತ್ತಾಂಶವು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ರೂಪಿಸುವಿಕೆ ಮತ್ತು ಜಾರಿಯಲ್ಲಿ ನೆರವಾಗಲಿದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande