ನವದೆಹಲಿ, 20 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೀಪಾವಳಿ ಹಬ್ಬದ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಳೆ ದೆಹಲಿಯ ಪ್ರಖ್ಯಾತ ಘಂಟೆವಾಲಾ ಸಿಹಿ ತಿಂಡಿ ಅಂಗಡಿಗೆ ತೆರಳಿ ತಮ್ಮ ಕೈಯಿಂದ ಇಮರ್ತಿ ಮತ್ತು ಬೇಸನ್ ಲಡ್ಡೂ ತಯಾರಿಸುವ ಪ್ರಯತ್ನ ಮಾಡುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ. ಸಿಹಿ ತಯಾರಿಕೆಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ದೇಶದ ಜನರಿಗೆ ದೀಪಾವಳಿಯ ಶುಭ ಕೋರಿದ್ದಾರೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ದೀಪಾವಳಿಯ ನಿಜವಾದ ಮಾಧುರ್ಯ 'ಥಾಲಿ'ಯಲ್ಲಿ ಮಾತ್ರವಲ್ಲ, ಸಂಬಂಧಗಳು ಮತ್ತು ಸಮುದಾಯದಲ್ಲಿಯೂ ಇದೆ. ಹಳೆಯ ದೆಹಲಿಯ ಪ್ರಸಿದ್ಧ ಮತ್ತು ಐತಿಹಾಸಿಕ ಘಂಟೆವಾಲಾ ಸಿಹಿ ಅಂಗಡಿಯಲ್ಲಿ ಇಮಾರ್ತಿ ಮತ್ತು ಬೇಸನ್ ಲಡ್ಡೂ ತಯಾರಿಸಲು ನಾನು ಪ್ರಯತ್ನಿಸಿದೆ ಎಂದು ಬರೆದುಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa