ಮರಿಯಮ್ಮನಹಳ್ಳಿ, 20 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮರಿಯಮ್ಮನಹಳ್ಳಿ ವೃತ್ತಿ ರಂಗಭೂಮಿಯ ತವರೂರಾಗಿದ್ದು ರಂಗಭೂಮಿಯ ಅನುಭವ ಮಂಟಪವಾಗಿದೆ ಎಂದು ದಾವಣಗೆರೆಯ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದುರ್ಗಾದಾಸ್ ಕಲಾಮಂದಿರದಲ್ಲಿ ನಡೆದ ಡಾ. ಕೆ. ನಾಗರತ್ನಮ್ಮ ಅಭಿನಂದನಾ ಸಮಿತಿ, ರಂಗಸಿರಿ ಕಲಾ ಟ್ರಸ್ಟ್ ಹಾಗೂ ಮಾರುತಿ ಕಲಾರಂಗ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತೆ ಡಾ. ಕೆ. ನಾಗರತ್ನಮ್ಮ ಅವರ ಅಭಿನಂದನಾ ಗ್ರಂಥ ರಂಗಸಿರಿ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಜಾತಿ- ಧರ್ಮದವರು ರಂಗಭೂಮಿಯಲ್ಲಿ ತೊಡಗಿಸಿಕೊಂಡು ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದಾರೆ. ಆಧುನಿಕ ರಂಗಭೂಮಿಯಲ್ಲಿ ರಂಗಪರಂಪರಗೆ ನಿರೀಕ್ಷಿದ ಮಹತ್ವ ಸಿಗುತ್ತಿಲ್ಲ. ಪ್ರಯೋಗಶೀಲತೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿಲ್ಲ. ಅಲ್ಲದೇ, ಪ್ರಯೋಗಶೀಲತೆಯಲ್ಲಿ ವೈಚಾರಿಕೆತೆ ಇರಬೇಕು ಎಂದರು.
ಕನ್ನಡ ರಂಗಭೂಮಿಗೆ ಸುಮಾರು 150-160 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಇದರμÉ್ಟೀ ಇತಿಹಾಸವನ್ನು ನಾರಾಯಣದೇವರಕೆರೆ ಮತ್ತು ಮರಿಯಮ್ಮನಹಳ್ಳಿ ಸಹ ಹೊಂದಿವೆ. ತುಂಗಭದ್ರಾ ಜಲಾಶಯ ನಿರ್ಮಾಣದ ಸಂದರ್ಭದಲ್ಲಿ ನಾರಾಯಣ ದೇವರ ಕೆರೆಯ ಕಲೆ, ಸಂಗೀತ, ಸಂಸ್ಕøತಿಯನ್ನು ಹೊಂದಿರುವ ಸಾಕಷ್ಟು ಕಲಾವಿದರು ಮರಿಯಮ್ಮನಹಳ್ಳಿಗೆ ಸ್ಥಳಾಂತರಗೊಂಡು ಅಲ್ಲಿನ ಭಾವನಾತ್ಮಕ ಸಂಬಂಧವನ್ನು ಇಲ್ಲಿ ನಾಟಕ, ಸಂಗೀತ ಸೇರಿದಂತೆ ಅನೇಕ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರ ಊರು ಮರಿಯಮ್ಮನಹಳ್ಳಿ ಇಡೀ ದೇಶದಲ್ಲಿ ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.
ಮರಿಯಮ್ಮನಹಳ್ಳಿ ದುರ್ಗಾದಾಸ್ ಮತ್ತು ಎಲಿವಾಳ ಸಿದ್ದಯ್ಯ ಅವರು ನಾಡಿನ ಮೇರು ನಟರಾಗಿದ್ದರು. ಕಂದಗಲ್ ಹನುಮಂತರಾಯರು ಚಿತ್ರಾಂಗದ ನಾಟಕದಲ್ಲಿ ದುರ್ಗಾದಾಸ್ ಅವರೊಗಾಗಿಯೇ ಅರ್ಜುನನ ಪಾತ್ರವನ್ನು ರಚಿಸಿದ್ದರು. ಪ್ರಸ್ತುತ ಆಧುನಿಕ ರಂಗಭೂಮಿಯಲ್ಲಿ ಮೇರು ನಟರು, ಆದರ್ಶ ನಟರನ್ನು ಕಾಣಲು ಸಾಧ್ಯವಿಲ್ಲ. ನಟ- ನಟಿಗಾಗಿ ನಾಟಕ ಬರೆಯುವುದು ಸಾಮಾನ್ಯ ಮಾತಲ್ಲ ಎಂದರು.
ಹಂಪಿ ಕನ್ನಡ ವಿವಿ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥ ಡಾ. ವೆಂಕಟಗಿರಿ ದಳವಾಯಿ ಅವರು ಅಭಿನಂದನಾ ಗ್ರಂಥದ ಕುರಿತು, ದೇವಾಲಯಗಳಿಗೆ ಇರುವಷ್ಟು ಪ್ರಾಚೀನ ಇತಿಹಾಸ ರಂಗಭೂಮಿಗೂ ಇದೆ. ರಂಗಪರಂಪರೆಗೆ ಬಹು ದೊಡ್ಡ ಇತಿಹಾಸವಿದೆ. ಕನ್ನಡದಲ್ಲಿ ಮಹಿಳೆಯವರ ರಂಗಭೂಮಿ ಕಲಾವಿದೆಯರ ಆತ್ಮಕಥೆಗಳು – ಜೀವನ ಚರಿತ್ರೆಗಳು : ಅಭಿನಂದನಾ ಗ್ರಂಥಗಳು ಹೆಚ್ಚಾಗಿ ಪ್ರಕಟವಾಗಿಲ್ಲ. ಅಭಿನೇತ್ರಿ ಡಾ. ಕೆ. ನಾಗರತ್ನಮ್ಮ ಅವರ ಕುರಿತು ಅಭಿನಂದನಾ ಗ್ರಂಥ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಅಭಿನೇತ್ರಿ ಡಾ. ಕೆ. ನಾಗರತ್ನಮ್ಮ ಅವರ ಅಭಿನಂದನಾ ಗ್ರಂಥದಲ್ಲಿ ು 71 ಲೇಖನಗಳನ್ನು ಒಳಗೊಂಡಿದೆ. ಸಾಹಿತಿಗಳು, ಲೇಖಕರು, ವಿಧ್ವಾಂಸರು, ಪ್ರಾಧ್ಯಾಪಕರು, ಕಲಾವಿದರು, ಸಹ ಕಲಾವಿದರು ಸೇರಿದಂತೆ ಕುಟುಂಬದ ಸದಸ್ಯರು ವಸ್ತು ನಿμÉ್ಠಯ ವಿಷಯವನ್ನು ಅಭಿನಂದನಾ ಗ್ರಂಥದಲ್ಲಿ ಬೆರೆದಿದ್ದಾರೆ. ಈ ಗ್ರಂಥ ಕರ್ನಾಟಕ ರಂಗಭೂಮಿಯ ಚರಿತ್ರೆಗೆ ಬಹಳ ಮುಖ್ಯವಾದ ಆಕರ ಗ್ರಂಥವಾಗಿದೆ ಎಂದರು.
ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಅವರು ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿದರು. ಹೈಕೋರ್ಟ್ ವಕೀಲ ಅನಂತನಾಯ್ಕ ಎನ್., ಮುಂಬೈನ ಸಾಹಿತಿ ಗೋಪಾಲ್ ತ್ರಾಸಿ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್. ಜಂಬಯ್ಯನಾಯಕ ಅವರು ವೇದಿಕೆಯಲ್ಲಿದ್ದರು.
ವಿಜಯನಗರ ಜಿಲ್ಲಾ ಗ್ರಾರೆಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ಕುರಿ ಶಿವಮೂರ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಡೂರಿನ ಪ್ರಭುಮಹಾಸ್ವಾಮಿಗಳು, ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ ದಿವ್ಯ ಸಾನಿಧ್ಯವಹಿಸಿದ್ದರು.
ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕøತೆ ಡಾ.ಕೆ. ನಾಗರತ್ನಮ್ಮ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತೆ ಮಾತಾ ಮಂಜಮ್ಮ ಜೋಗತಿ, ನಾಡೋಜ ಪುರಸ್ಕøತ ವಿ.ಟಿ. ಕಾಳೆ, ಪ.ಪಂ. ಅಧ್ಯಕ್ಷ ಆದಿಮನಿ ಹುಸೇನ್ ಭಾಷ, ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಕಲಾವಿದೆ ಎಸ್. ರೇಣುಕಾ, ಸಿಪಿಐ ಸರಳ .ಪಿ, ಸ್ಥಳೀಯ ಮುಖಂಡರಾದ ಗೋವಿಂದರ ಪರುಶುರಾಮ, ಎಚ್. ಮಂಜುನಾಥ, ಗರಗ ಪ್ರಕಾಶ್, ರೋಗಾಣಿ ಮಂಜುನಾಥ, ಡಿ. ರಾಘವೇಂದ್ರ ಶೆಟ್ಟಿ, ಟಿ. ಬಸವರಾಜ ಸೇರಿದಂತೆ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನಾ ತಳವಾರ್ ಅವರು ಪ್ರಾರ್ಥಿಸಿದರು. ಎಸ್. ನವೀನ್ ಅವರು ಸ್ವಾಗತಿಸಿದರು. ಡಿ. ರಾಘವೇಂದ್ರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ. ಪರುಶುರಾಮ ಅವರು ಕಾರ್ಯಕ್ರಮ ನಿರೂಪಿಸಿದರು. ಕೆ. ಪಂಕಜ ಬಸವರಾಜ ಅವರು ವಂದಿಸಿದರು.
ಕೆ. ಪಂಕಜ ಬಸವರಾಜ ಮತ್ತು ತಂಡದವರಿಂದ ರಂಗಗೀತೆಗಳ ಗಾಯನ ನಡೆಯಿತು. ಬೆಂಗಳೂರಿನ ತಂಡದಿಂದ ಕಿಂದರಜೋಗಿ ನಾಟಕ ಪ್ರದರ್ಶನಗೊಂಡಿತು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್