ಸರ್ಕಾರಿ ವೀಕ್ಷಣಾಲಯ ಸಂಸ್ಥೆಗೆ ಬಾಡಿಗೆ ಕಟ್ಟಡಕ್ಕೆ ಆಹ್ವಾನ
ಚಿತ್ರದುರ್ಗ, 20 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಚಿತ್ರದುರ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಚಿತ್ರದುರ್ಗ ನಗರದ ಸರ್ಕಾರಿ ವೀಕ್ಷಣಾಲಯ ಸಂಸ್ಥೆಗೆ ಬಾಡಿಗೆ ಕಟ್ಟಡ ಬೇಕಾಗಿದೆ. ಸರ್ಕಾರಿ ವೀಕ್ಷಣಾಲಯದಲ್ಲಿ ಬಾಲ್ಯನ್ಯಾಯ
ಸರ್ಕಾರಿ ವೀಕ್ಷಣಾಲಯ ಸಂಸ್ಥೆಗೆ ಬಾಡಿಗೆ ಕಟ್ಟಡಕ್ಕೆ ಆಹ್ವಾನ


ಚಿತ್ರದುರ್ಗ, 20 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಚಿತ್ರದುರ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಾರ್ಯನಿರ್ವಹಿಸುತ್ತಿರುವ ಚಿತ್ರದುರ್ಗ ನಗರದ ಸರ್ಕಾರಿ ವೀಕ್ಷಣಾಲಯ ಸಂಸ್ಥೆಗೆ ಬಾಡಿಗೆ ಕಟ್ಟಡ ಬೇಕಾಗಿದೆ.

ಸರ್ಕಾರಿ ವೀಕ್ಷಣಾಲಯದಲ್ಲಿ ಬಾಲ್ಯನ್ಯಾಯ ಕಾಯ್ದೆ-2000 ಮತ್ತು ತಿದ್ದುಪಡಿ 2006 ಕಾಯ್ದೆಯ ಅನುಷ್ಠಾನ ಯೋಜನೆಯಡಿಯಲ್ಲಿ ಕಾನೂನಿನೊಡನೆ ಸಂಘರ್ಷಕ್ಕೆ ಒಳಪಟ್ಟ ಮತ್ತು ರಕ್ಷಣೆ ಹಾಗೂ ಪೋಷಣೆ ಅಗತ್ಯವಿರುವ ಮಕ್ಕಳಿಗೆ ಉಚಿತ ವಸತಿ, ಊಟ, ಬಟ್ಟೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ ತರಬೇತಿ, ವೈದ್ಯಕೀಯ ನೆರವು, ಮನೋರಂಜನೆ, ಸಲಹಾ ಸೇವೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.

ಸರ್ಕಾರಿ ವೀಕ್ಷಣಾಲಯವು 25 ಮಕ್ಕಳ ಸಾಮಥ್ರ್ಯ ಹೊಂದಿದ್ದು, ನಿವಾಸಿಗಳ ಹಿತದೃಷ್ಟಿಯಿಂದ 60*40ರ ಅಳತೆಯ 3 ಅಥವಾ 4 ಕೋಣೆಯ, ದೊಡ್ಡ ಹಾಲ್ ಹಾಗೂ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವು ಬಾಡಿಗೆಗಾಗಿ ಬೇಕಾಗಿರುವುದರಿಂದ ಸಂಬಂಧಪಟ್ಟ ಮನೆ ಮಾಲೀಕರು ಇಲಾಖೆಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande