ಬಳ್ಳಾರಿ, 20 ಅಕ್ಟೋಬರ್ (ಹಿ.ಸ.)
ಆ್ಯಂಕರ್ : ಬೆಳಗಾವಿಯ ರಮೇಶ್‍ಕತ್ತಿ ಅವರು ವಾಲ್ಮೀಕಿ ನಾಯಕ ಬೇಡರ ಜಾತಿಯನ್ನು ಅವ್ಯಾಚ ಶಬ್ದಗಳಿಂದ ಬೈದು ಜಾತಿ ನಿಂದನೆಯನ್ನು ಮಾಡಿದ್ದು ಎಸ್ಸಿ-ಎಸ್‍ಟಿ ಜಾತಿ ನಿಂದನೆ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹಿಸಿ ಕರ್ನಾಟಕ ವಾಲ್ಮೀಕಿ ನಾಯಕರ ಜಾಗೃತ ವೇದಿಕೆ ಆಗ್ರಹಿಸಿದೆ.
ಈ ಕುರಿತು ಮನವಿ ಸಲ್ಲಿಸಿರುವ ವೇದಿಕೆಯ ಪದಾಧಿಕಾರಿಗಳು ಮತ್ತು ಸದಸ್ಯರು, ಬೆಳಗಾವಿಯ ಬಿ.ಕೆ.ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣಾ ಮತದಾನದ ಸಂದರ್ಭದಲ್ಲಿ ಬೆಲ್ಲದ ಬಾಗೇವಾಡಿಯಲ್ಲಿ ರಮೇಶ್ ಕತ್ತಿ ಅವರು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ.
ರಮೇಶ್ ಕತ್ತಿ ಅವರ ನಿಂದನೆಯಿಂದ ಕರ್ನಾಟಕದಲ್ಲಿರುವ 75 ಲಕ್ಷ ವಾಲ್ಮೀಕಿ ನಾಯಕ ಸಮುದಾಯದ ಮನಸ್ಸಿಗೆ ತೀವ್ರ ನೋವಾಗಿದೆ. ರಮೇಶ್ ಕತ್ತಿ ಅವರು ಸಮಾಜದ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಬೇಕು ಎಂದು ಅವರು ವೇದಿಕೆ ಆಗ್ರಹಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್