ದೆಹಲಿಯ ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ
ನವದೆಹಲಿ, 20 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದೀಪಾವಳಿ ಹಬ್ಬದ ಬೆಳಗಿನ ಜಾವದಿಂದಲೇ ದೆಹಲಿಯ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದ್ದು, ಮಧ್ಯಾಹ್ನದ ಹೊತ್ತಿಗೆ ವಾಯು ಗುಣಮಟ್ಟ ಸೂಚ್ಯಂಕ 300 ದಾಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಅಪ್ಲಿಕೇಶನ್ ಪ್ರಕಾರ ಮಧ್ಯಾಹ್ನ 12 ಗಂಟೆಯ ವೇಳ
Pollution


ನವದೆಹಲಿ, 20 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೀಪಾವಳಿ ಹಬ್ಬದ ಬೆಳಗಿನ ಜಾವದಿಂದಲೇ ದೆಹಲಿಯ ಗಾಳಿಯ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದ್ದು, ಮಧ್ಯಾಹ್ನದ ಹೊತ್ತಿಗೆ ವಾಯು ಗುಣಮಟ್ಟ ಸೂಚ್ಯಂಕ 300 ದಾಟಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಮೀರ್ ಅಪ್ಲಿಕೇಶನ್ ಪ್ರಕಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ದೆಹಲಿಯ ಒಟ್ಟು AQI 334 ಕ್ಕೆ ದಾಖಲಾಗಿದೆ.

ರಾಜಧಾನಿಯ 38 ಮೇಲ್ವಿಚಾರಣಾ ಕೇಂದ್ರಗಳಲ್ಲಿ 31 ಸ್ಥಳಗಳಲ್ಲಿ 'ತುಂಬಾ ಕಳಪೆ' ಮಟ್ಟದ ಮಾಲಿನ್ಯ ವರದಿಯಾಗಿದ್ದು, ಆನಂದ್ ವಿಹಾರ್ (402), ವಜೀರ್‌ಪುರ (423) ಮತ್ತು ಅಶೋಕ್ ವಿಹಾರ್ (414) ಪ್ರದೇಶಗಳಲ್ಲಿ 'ತೀವ್ರ' ಮಟ್ಟದ ವಾಯು ಮಾಲಿನ್ಯ ದಾಖಲಾಗಿದೆ.

ಮಂಗಳವಾರ ಮತ್ತು ಬುಧವಾರ ಗಾಳಿಯ ಗುಣಮಟ್ಟ ಇನ್ನಷ್ಟು ಹದಗೆಟ್ಟು 'ತೀವ್ರ' ವರ್ಗಕ್ಕೆ ತಲುಪುವ ಸಾಧ್ಯತೆ ಇದೆ.

ಈ ನಡುವೆ, ವಾಯು ಗುಣಮಟ್ಟ ನಿರ್ವಹಣಾ ಆಯೋಗ ಈಗಾಗಲೇ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆಯ ಎರಡನೇ ಹಂತವನ್ನು ರಾಜಧಾನಿ ಪ್ರದೇಶದಲ್ಲಿ ಜಾರಿಗೆ ತಂದಿದೆ. ಹಬ್ಬದ ನಂತರ ವಾಹನ ಸಂಚಾರ, ಪಟಾಕಿ ಹೊಗೆ ಹಾಗೂ ಧೂಳು ಸೇರಿದಂತೆ ನಾನಾ ಕಾರಣಗಳಿಂದ ಗಾಳಿಯ ಮಾಲಿನ್ಯ ಮಟ್ಟ ಏರಿಕೆಯಾಗಿರುವುದಾಗಿ ತಜ್ಞರು ತಿಳಿಸಿದ್ದಾರೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande