ನ.೫ರಂದು ರಾಯ್‌ಪುರದಲ್ಲಿ ವಾಯುಪಡೆಯ ವೈಮಾನಿಕ ಪ್ರದರ್ಶನ
ರಾಯ್‌ಪುರ, 20 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಛತ್ತೀಸ್‌ಗಢ ರಾಜ್ಯ ಸ್ಥಾಪನೆಯ 25ನೇ ವರ್ಷಾಚರಣೆಯ ಸಂಭ್ರಮದ ಅಂಗವಾಗಿ ನವೆಂಬರ್ 5 ರಂದು ರಾಜಧಾನಿ ರಾಯ್‌ಪುರದಲ್ಲಿ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ’ ಮೊದಲ ಬಾರಿಗೆ ವಾಯು ಪ್ರದರ್ಶನ ನೀಡಲಿದೆ. ಸುಮಾರು 40 ನಿಮಿಷಗಳ ಕಾಲ ನಡೆಯಲ
Air show


ರಾಯ್‌ಪುರ, 20 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಛತ್ತೀಸ್‌ಗಢ ರಾಜ್ಯ ಸ್ಥಾಪನೆಯ 25ನೇ ವರ್ಷಾಚರಣೆಯ ಸಂಭ್ರಮದ ಅಂಗವಾಗಿ ನವೆಂಬರ್ 5 ರಂದು ರಾಜಧಾನಿ ರಾಯ್‌ಪುರದಲ್ಲಿ ಭಾರತೀಯ ವಾಯುಪಡೆಯ ‘ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ’ ಮೊದಲ ಬಾರಿಗೆ ವಾಯು ಪ್ರದರ್ಶನ ನೀಡಲಿದೆ.

ಸುಮಾರು 40 ನಿಮಿಷಗಳ ಕಾಲ ನಡೆಯಲಿರುವ ಈ ಪ್ರದರ್ಶನದಲ್ಲಿ ಒಂಬತ್ತು ಯುದ್ಧ ವಿಮಾನಗಳು ರಚನಾತ್ಮಕ ಹಾರಾಟ, ಸಮನ್ವಯಿತ ಚಲನೆಗಳು ಮತ್ತು ಸಾಹಸಮಯ ಏರೋಬ್ಯಾಟಿಕ್ ಪ್ರದರ್ಶನಗಳ ಮೂಲಕ ಪ್ರೇಕ್ಷಕರ ಮನ ಗೆಲ್ಲಲಿವೆ.

ರಾಜ್ಯದ “ಬೆಳ್ಳಿ ಮಹೋತ್ಸವ ರಾಜ್ಯೋತ್ಸವ” ಆಚರಣೆಯ ಭಾಗವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ರಾಯ್‌ಪುರ ಸಂಸದ ಬ್ರಿಜ್‌ಮೋಹನ್ ಅಗರ್‌ವಾಲ್ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande