ಜಗದಲ್ಪುರ, 20 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಛತ್ತಿಸಗಢದ ನಕ್ಸಲ್ ಪೀಡಿತ ಬಸ್ತಾರ್ ವಿಭಾಗದಲ್ಲಿ ಕಳೆದ 28 ದಿನಗಳಿಂದ ಯಾವುದೇ ಗುಂಡಿನ ಚಕಮಕಿ ದಾಖಲಾಗಿಲ್ಲ. ಇದು ಕಳೆದ ಎರಡು ದಶಕಗಳ ಹಿಂಸಾಚಾರದ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಸೆಪ್ಟೆಂಬರ್ 23ರಂದು ನಾರಾಯಣಪುರ ಅರಣ್ಯದಲ್ಲಿ ನಡೆದ ಕೊನೆಯ ಎನ್‌ಕೌಂಟರ್‌ನ ಬಳಿಕ ಗುಂಡಿನ ಸದ್ದು ನಿಂತಿದೆ.
ಬಸ್ತಾರ್ ಐಜಿಪಿ ಸುಂದರರಾಜ್ ಪಿ. ಅವರು, “ಕಾರ್ಯಾಚರಣೆ ನಿಲ್ಲುವುದಿಲ್ಲ, ಆದರೆ ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಸೇರುವ ನಕ್ಸಲರಿಗೆ ಸ್ವಾಗತ” ಎಂದಿದ್ದಾರೆ. ಇತ್ತ ಗೃಹ ಸಚಿವ ವಿಜಯ್ ಶರ್ಮಾ ಶರಣಾಗತ ನಕ್ಸಲರಿಗೆ ಸುರಕ್ಷಿತ ಕಾರಿಡಾರ್ ಒದಗಿಸುವ ಭರವಸೆ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ 210 ನಕ್ಸಲರು, ಅವರಲ್ಲೂ ಕೇಂದ್ರ ಸಮಿತಿಯ ಸದಸ್ಯರೂ ಸೇರಿ, ಶರಣಾಗಿದ್ದಾರೆ. ನಕ್ಸಲ್ ಸಂಘಟನೆಯೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಭದ್ರತಾ ಪಡೆಗಳ ಒತ್ತಡದಿಂದ ಹಿಂಸಾಚಾರ ಕುಸಿತ ಕಂಡಿದೆ. ಸರ್ಕಾರದ ಮಾತುಕತೆ-ಆಧಾರಿತ ಹೊಸ ತಂತ್ರ ಶಾಂತಿಯತ್ತ ದಾರಿಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa