ಕೋಲಾರದಲ್ಲಿ ರಾಷ್ಟ್ರಪಿತನಿಗೆ ಮದ್ಯ ಮಾಂಸ ಅರ್ಪಣೆ
ಕೋಲಾರದಲ್ಲಿ ರಾಷ್ಟ್ರಪಿತನಿಗೆ ಮದ್ಯ ಮಾಂಸ ಅರ್ಪಣೆ
ಚಿತ್ರ; ಕೋಲಾರ ನಗರದ ಮಾಂಸ ಮಾರುಕಟ್ಟೆಯಲ್ಲಿ ಗಾಂಧಿ ಜಯಂತಿಯಂದು ಎಂದಿನಂತೆ ಮಾಂಸ ಮಾರಾಟ ನಡೆಯಿತು.


ಕೋಲಾರ, 02 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಜಗತ್ತಿಗೆ ಅಹಿಂಸಾ ಸಂದೇಶವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜಯಂತಿಯನ್ನು ಎಲ್ಲೆಡೆ ಗುರುವಾರ ಆಚರಿಸಲಾಯಿತು.

ಕೋಲಾರ ಜಿಲ್ಲೆಯಲ್ಲಿ ಗಾಂಧೀವನದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸಂಸದ ಎಂ.ಮಲ್ಲೇಶ್ ಬಾಬು ಪುಷ್ಪನಮನ ಸಲ್ಲಿಸಿದರು.

ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಗಳರವರು ಗಾಂಧಿ ಭಾವ ಚಿತ್ರಕ್ಕೆ ನಮನ ಸಲ್ಲಿಸಿದರು.

ಅಹಿಂಸೆಯನ್ನು ಪ್ರತಿಪಾದಿಸಿದ ಗಾಂದಿಯವರಿಗೆ ನಮನ

ಸಲ್ಲಿಸಲು ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು.

ಅಬಕಾರಿ ಇಲಾಖೆ ಎಲ್ಲ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಕಟ್ಟುನಿಟ್ಟಿನ ಆದೇಶ ಎಂದಿನಂತೆ ಹೊರಡಿಸಿತ್ತು.

ನಗರ ಸಭೆ ಕೋಲಾರದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಿತ್ತು. ಆದರೆ ಮದ್ಯ ಮತ್ತು ಮಾಂಸ ಮಾರಾಟದ ಆದೇಶ ಕಟ್ಟುನಿಟ್ಟಾಗಿ ಜಾರಿಗೆ ಬಂದಿರಲಿಲ್ಲ.

ಕೋಲಾರದಲ್ಲಿ ನಗರಸಭೆಗೆ ಸೇರಿದ ಮಾಂಸದ ಮಾರುಕಟ್ಟೆಯಲ್ಲಿ ಯಾವುದೇ ಅಡೆತಡೆ ಇಲ್ಲದೆ ಮಾಂಸ ಮಾರಾಟ ಬೆಳಿಗ್ಗೆಯಿಂದ ಸಂಜೆಯ ತನಕ ನಡೆಯಿತು. ಕುರಿ, ಕೋಳಿ ಮತ್ತು ಮೀನು ಮಾರಾಟ ಎಂದಿನಂತೆ ನಡೆಯಿತು.

ಮಾಂಸ ಮಾರಾಟವನ್ನು ತಡೆಯಬೇಕಾದ ನಗರಸಭೆಯ ಆರೋಗ್ಯ ನಿರೀಕ್ಷರ ಸುಳಿವೆ ಇರಲಿಲ್ಲ.ಇದರಿಂದಾಗಿ ಮಾಂಸ ಮಾರಾಟ ಯಾವುದೇ ಅಡೆ ತಡೆ ಇಲ್ಲದೆ ನಡೆಯಿತು.

ಪ್ರತಿ ವರ್ಷ ಗಾಂಧಿ ಜಯಂತಿಯಂದು ಯಾವುದೇ ಅಡಿ ಇಲ್ಲದೆ ಮಾಂಸ ಮಾರಾಟ ನಡೆಯುತ್ತದೆ. ಸಾರ್ವಜನಿಕರು ಮಾಹಿತಿ ನೀಡಿದರು ಸಹ ನಗರಸಭೆಯ ಸಿಬ್ಬಂದಿ ಮಾರುಕಟ್ಟೆಯ ಕಡೆ ಸುಳಿಯುವುದೇ ಇಲ್ಲ.

ಮಾಂಸ ಮಾರಾಟಗಾರರ ಋಣಭಾರದಲ್ಲಿರುವ ನಗರಸಭೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಿಷೇಧವನ್ನು ಉಲ್ಲಂಘಿಸಿ ಮಾಂಸ ಮಾರಾಟ ಮಾಡುವರರ ವಿರುಧ್ದ ಕ್ರಮಕೈಗೊಳ್ಳಲು ಸ್ಥಳೀಯ ಸಂಸ್ಥೆಗಳ ಕಾಯ್ದೆಯಲ್ಲಿ ನಗರಸಭೆಗೆ ಅಧಿಕಾರವಿದೆ.ಆದರೆ ಗಾಂಧಿ ಜಯಂತಿ ದಿನದಂದು ಸಾರ್ವತ್ರಿಕ ರಜೆ ಆದ ಕಾರಣ ನಗರ ಸಭೆಯ ಅಧಿಕಾರಿಗಳು ಮತ್ತು ನೌಕರರು ಬೆಳಿಗ್ಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗಳಿಗೆ ತೆರೆಳುತ್ತಾರೆ.

ಕೋಲಾರದ ಪ್ರಮುಖ ಮಾಂಸದ ಮಾರುಕಟ್ಟೆಯಲ್ಲದೆ ನಗರದ ವಿವಿದ ಕಡೆ ಮಾಂಸ ಮಾರಾಟ ಬಿರುಸಾಗಿ ನಡೆಯಿತು.

ಸಂಧಿಗೊಂದಿಯಲ್ಲಿ ಕುರಿ ಮತ್ತು ಕೋಳಿ ಮಾಂಸದ ಅಂಗಡಿಗಳು ತೆರೆದಿದ್ದವು. ನಗರದ ಹೊರವಲದ ಡಾಬ ಮತ್ತು ಹೋಟಲ್‌ಗಳಲ್ಲಿ ಮಾಂಸದ ಭೋಜನ ಗ್ರಾಹಕರಿಗೆ ಲಭ್ಯವಿತ್ತು.

ಕೋಲಾರದ ಪ್ರಮುಖ ಮಾಂಸದ ಹೊಟಲ್‌ಗಳನ್ನು ಎಂದಿನಂತೆ ತೆರೆಯಲಾಗಿತ್ತು. ನಗರದ ಕತೆ ಇದಾದರೆ ಗ್ರಾಮೀಣ ಭಾUಗಳಲ್ಲಿ ಯಾವುದೇ ಅಡೆತಡೆ ಇಲ್ಲದೆ ಮಾಂಸ ಮಾರಾಟ ನಡೆಯಿತು.

ಮಾಂಸ ಮಾರಾಟದ ನಿಷೇಧವನ್ನು ಗ್ರಾಮ ಪಂಚಾಯಿತಿಗಳು ಜಾರಿ ಮಾಡುವ ಜವಾಬ್ದಾರಿ ಹೊಂದಿವೆ.ಆದರೆ ಮಹಾತ್ಮ ಗಾಂಧಿ ಭಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಫೋಟೊ ಅಪಲೊಡ್ ಮಾಡಿ ತೆರಳುವ ಸಿಬ್ಬಂದಿ ಮಾಂಸ ಮಾರಾಟದ ಬಗ್ಗೆ ಯಾವುದೇ ಕ್ರಮ ವಹಿಸುವುದಿಲ್ಲ.

ಮಾಂಸ ಮಾರಾಟದ ಕತೆ ಹೀಗಾದರೆ ಮದ್ಯದ ಅಂಗಡಿಗಳಿಗೆ ಬೀಗ ಹಾಕಲಾಗಿತ್ತು.

ಕೆಲವು ಲಾಭಕೋರ ಮಾಲೀಕರು ಮೊದಲೇ ಹೊರಗೆ ದಾಸ್ತಾನು ಮಾಡಿ ಗೌಪ್ಯವಾಗಿ ಮಾರಾಟ ಮಾಡಿದರು.

ಪ್ರತಿದಿನ ಮದ್ಯ ಸೇವನೆ ಮಾಡುವ ಗ್ರಾಹಕರಿಗೆ ಸರಬರಾಜು ಮಾಡಲಾಯಿಂತು. ಮದ್ಯವಸನಿಗಳು ಸಂದಿಗೊಂದಿಯಲ್ಲಿ ಮದ್ಯಸೇವನೆ ಮಾಡಿದರು.

ನಗರಸಭೆಯ ಆವರಣದಲ್ಲಿರುವ ಕೋಲಾರ ಟೌನ್ ಕ್ಲಬ್ ಬಾಗಿಲನ್ನು ಮುಂದೆ ಮುಚ್ಚಲಾಗಿತ್ತು. ಆದರೆ ಹಿಂಬಾಗಿಲು ತೆರೆಯಲಾಗಿತ್ತು. ಯಾರಿಗೂ ಅನುಮಾನ ಬರದಂತೆ ಸದಸ್ಯರು ಹಿಂಬಾಗಿಲಿನಿಂದ ಕ್ಲಬ್ ಪ್ರವೇಶ ಮಾಡಿ ಮದ್ಯ ಸೇವನೆ ಮತ್ತು ಇಸ್ಪೀಟ್ ಆಡಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದರು.

ಪ್ರತಿ ವರ್ಷ ಯಾವುದೇ ನಿರ್ಬ0ಧವಿಲ್ಲದೆ ಟೌನ್ ಕ್ಲಬ್ ತೆರೆಯಲಾಗುತ್ತದೆ. ಈ ಕ್ಲಬ್ ಮದ್ಯ ಮಾರಾಟದ ಲೈಸನ್ಸ್ ಹೊಂದಿದೆ.ಅಬಕಾರಿ ನಿಯಮಗಳ ಪ್ರಕಾರ ಸನ್ನದುದಾರರ ವಿಳಾಸವನ್ನು ಪ್ರದರ್ಶಿಸಬೇಕು. ಆದರೆ ಟೌನ್ ಕ್ಲಬ್ ಯಾವುದೇ ನಿಯಮಗಳನ್ನು ಪಾಲನೇ ಮಾಡುವುದಿಲ್ಲ.

ಚಿತ್ರ : ಕೋಲಾರ ನಗರದ ಮಾಂಸ ಮಾರುಕಟ್ಟೆಯಲ್ಲಿ ಗಾಂಧಿ ಜಯಂತಿಯಂದು ಎಂದಿನಂತೆ ಮಾಂಸ ಮಾರಾಟ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande