ನವದೆಹಲಿ, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದುಷ್ಟದ ಮೇಲೆ ಸತ್ಯ ಮತ್ತು ಧರ್ಮದ ವಿಜಯದ ಸಂಕೇತವಾದ ವಿಜಯದಶಮಿಯ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ದೇಶದ ಜನತೆಗೆ ಶುಭಾಶಯಗಳನ್ನು ಕೋರಿದರು.
ರಾಷ್ಟ್ರಪತಿ ಮುರ್ಮು, “ಈ ಹಬ್ಬವು ಸತ್ಯ ಮತ್ತು ನ್ಯಾಯದ ಮಾರ್ಗವನ್ನು ಅನುಸರಿಸಲು ಪ್ರೇರೇಪಿಸುತ್ತದೆ. ರಾವಣ ದಹನ ಮತ್ತು ದುರ್ಗಾ ಪೂಜೆಯಂತಹ ಹಬ್ಬಗಳು ಕೋಪ, ಅಹಂಕಾರವನ್ನು ತ್ಯಜಿಸಿ ಧೈರ್ಯ ಮತ್ತು ಪರಿಶ್ರಮವನ್ನು ಅಳವಡಿಸಿಕೊಳ್ಳಲು ಸಂದೇಶ ನೀಡುತ್ತವೆ” ಎಂದರು.
ಪ್ರಧಾನಿ ಮೋದಿ, ವಿಜಯದಶಮಿ ದುಷ್ಟ ಮತ್ತು ಸುಳ್ಳಿನ ಮೇಲೆ ಸತ್ಯದ ವಿಜಯವನ್ನು ಸಂಕೇತಿಸುತ್ತದೆ. ಧೈರ್ಯ, ಬುದ್ಧಿವಂತಿಕೆ ಮತ್ತು ಭಕ್ತಿಯ ಹಾದಿಯಲ್ಲಿ ಸಾಗಲು ಈ ಹಬ್ಬ ಸ್ಫೂರ್ತಿಯಾಗಲಿ ಎಂದು ಹೇಳಿದರು.
ಬಿಜೆಪಿ ಅಧ್ಯಕ್ಷ ನಡ್ಡಾ, “ಧರ್ಮೋ ಜಯತಿ ನಾಧರ್ಮಃ ಸತ್ಯಂ ಜಯತಿ ನಾನೃತಂ” ಎಂಬ ಶ್ಲೋಕ ಉಲ್ಲೇಖಿಸಿ, ಶ್ರೀರಾಮನ ಆದರ್ಶಗಳನ್ನು ಅಳವಡಿಸಿಕೊಂಡು ಜೀವನವನ್ನು ಅರ್ಥಪೂರ್ಣಗೊಳಿಸಬೇಕು ಎಂದು ಕರೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa