ಕೋಲಾರದಲ್ಲಿ ಗಾಂಧೀ ಜಯಂತಿ ಆಚರಣೆ
ಕೋಲಾರದಲ್ಲಿ ಗಾಂಧೀಜಯಂತಿ ಆಚರಣೆ
ಚಿತ್ರ ; ಕೋಲಾರ ನಗರದ ಗಾಂಧೀ ವೃತ್ತದಲ್ಲಿ ನಡೆದ ಗಾಂಧಿ ಜಯಂತಿ ಅಂಗವಾಗಿ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ, ಎಲ್ಲ ಧರ್ಮ ಗುರುಗಳಿಂದ ಧರ್ಮ ಗ್ರಂಥಗಳ ಸಂದೇಶ ಮತ್ತು ಶಾಲಾ ಮಕ್ಕಳಿಂದ ಭಜನೆ ನಡೆದವು.


ಕೋಲಾರ, 0೨ ಆಕ್ಟೋಬರ್ (ಹಿ.ಸ) :

ಆ್ಯಂಕರ್ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿಯನ್ನು ಇಂದು ಜಿಲ್ಲಾದ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ನಗರಸಭೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಗಾಂಧೀ ವೃತ್ತದಲ್ಲಿ ನಡೆದ ಗಾಂಧಿ ಜಯಂತಿ ಅಂಗವಾಗಿ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ, ಎಲ್ಲ ಧರ್ಮ ಗುರುಗಳಿಂದ ಧರ್ಮ ಗ್ರಂಥಗಳ ಸಂದೇಶ ಮತ್ತು ಶಾಲಾ ಮಕ್ಕಳಿಂದ ಭಜನೆ ನಡೆದವು.

ಸಂಸದ ಎಂ ಮಲ್ಲೇಶ್ ಬಾಬು ಮಾತನಾಡಿ, ಯುವ ಪೀಳಿಗೆ ಮಹಾತ್ಮ ಗಾಂಧೀಜಿ ನಡೆದು ಬಂದ ದಾರಿ ಮತ್ತು ಆದರ್ಶ ಗುಣಗಳನ್ನು ಪಾಲಿಸಬೇಕು. ದೇಶ ವಿದೇಶಗಳಲ್ಲಿ ಯುದ್ಧ ಮತ್ತು ಹೋರಾಟದ ಧ್ವನಿ ಕೇಳುತ್ತಿದೆ. ಆದರೆ ಗಾಂಧೀಜಿ ಅವರು ಅಹಿಂಸಾ ತತ್ತ್ವದ ಮೂಲಕ ಸ್ವತಂತ್ರವನ್ನು ಪಡೆದುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟರು. ಅವರು ಪ್ರಪಂಚಕ್ಕೆ ಮಹಾತ್ಮರು ಎಂದರು.

ಗಾಂಧೀಜಿಯ ಗ್ರಾಮ ಸ್ವರಾಜ್ಯವಾದರೇ ದೇಶ ಅಭಿವೃದ್ಧಿಯಾಗಲಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ನಾವು ಜಿಲ್ಲೆಯಲ್ಲಿ ಬಯಲು ಶೌಚಮುಕ್ತವಾಗಬೇಕು ಎಂದರು

ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಮಾತನಾಡಿ, ದೇಶಕ್ಕಾಗಿ ಹೋರಾಡಿದ ಮಹಾತ್ಮ ಗಾಂಧೀಜಿ ಅವರ ತತ್ವ ಸಿದ್ದಾಂತವನ್ನು ಎಲ್ಲರೂ ಅನುಸರಿಸಬೇಕು. ಗಾಂಧೀಜಿಯವರ ಹೋರಾಟಕ್ಕೆ ಜಿಲ್ಲೆಯಲ್ಲಿಯೂ ಸಾಕಷ್ಟು ಹೋರಾಟಗಾರರು ಸಾಥ್ ನೀಡಿದ್ದಾರೆ. ಅಂತವರನ್ನು ಗುರುತಿಸಿ ಅವರನ್ನು ನೆನೆಯುವಂತಹ ಕೆಲಸವನ್ನು ಮಾಡಬೇಕು ಎಂದರು.

ಜಿಲ್ಲಾಡಳಿತ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಣೆ ಮಾಡಲಾಯಿತು.

ನಗರಸಭೆ ಅಧ್ಯಕ್ಷರು ಲಕ್ಷ್ಮೀದೇವಮ್ಮ ರಮೇಶ್, ಉಪಾಧ್ಯಕ್ಷರು ಸಂಗೀತ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ನಗರಸಭೆ ಆಯುಕ್ತರು ನವೀನ್ ಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.

ಚಿತ್ರ ; ಕೋಲಾರ ನಗರದ ಗಾಂಧೀ ವೃತ್ತದಲ್ಲಿ ನಡೆದ ಗಾಂಧಿ ಜಯಂತಿ ಅಂಗವಾಗಿ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ, ಎಲ್ಲ ಧರ್ಮ ಗುರುಗಳಿಂದ ಧರ್ಮ ಗ್ರಂಥಗಳ ಸಂದೇಶ ಮತ್ತು ಶಾಲಾ ಮಕ್ಕಳಿಂದ ಭಜನೆ ನಡೆದವು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande