ಗದಗ, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ ಶಾಸ್ತ್ರೀ ಅವರ ಸಂದೇಶವನ್ನು ನಾವೆಲ್ಲರೂ ನವ್ಮ್ಮ ಜೀವನದಲ್ಲಿ ಅಳವಡಿಸಿಕೋಳಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ ಅವರು ಹೇಳಿದರು.
ಗದಗ ನಗರದ ಗಾಂಧೀ ಸರ್ಕಲ್ ಹತ್ತಿರ ಜಿಲ್ಲಾಡಳಿತ,ಗದಗ-ಬೆಟಗೇರಿ ನಗರಸಭೆ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ ಶಾಸ್ತ್ರೀ ಜನ್ಮ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧೀಜಿಯವರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು ಅವರು ಮಾತನಾಡಿದರು.
ಇದೇ ಸಂಭರ್ದದಲ್ಲಿ ಸ್ವಚ್ಚತಾ ಹೀ ಸೇವಾ ಹಾಗೂ ನಮಸ್ತೆ ಅಭಿಯಾನದಡಿಯಲ್ಲಿ ಗುರುತಿಸಲಾದ ಸೆಪ್ಟಿಕ್ ಟ್ಯಾಂಕ್ ಮತ್ತು ಸೀವರ್ ಸ್ವಚ್ಚತಾ ಕೆಲಸಗಾರರಿಗೆ ಸುರಕ್ಷಾ ಕಿಟ್‌ಗಳನ್ನು ಹಾಗೂ ಆಯುಷ್ಮಾನ್ ಭಾರತ್ ಕಾರ್ಡಗಳನ್ನು ವಿತರಿಸಿ ನಗರದ ಸ್ವಚ್ಚತೆ ಕಾರ್ಯದಲ್ಲಿ ಸ್ವಚ್ಚತಾ ಕೆಲಸಗಾರರ ಪಾತ್ರ ಮಹತ್ವದಾಗಿದ್ದು ಈ ನಿಟ್ಟಿನಲ್ಲಿ ನಗರದ ಎಲ್ಲಾ ಪೌರಕಾರ್ಮಿಕರು ನಗರಸಭೆಯಿಂದ ವಿತರಿಸಲಾಗುವ ಸುರಕ್ಷಾ ಕಿಟ್‌ಗಳನ್ನು ಧರಿಸಿಕೊಂಡು ಕೆಲಸ ಮಾಡವಂತೆ ಅಧಿಕಾರಿಗಳ ಕ್ರಮವಹಿಸಬೇಕೆಂದು ಎಂದರು.ಇದೇ ಸಚಿದರ್ಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಉದ್ಯಾನದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನ ನೀಡಿದರು.
ಈ ಸಂಧರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ದುರಗೇಶ.ಕೆ.ಆರ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಬಸವನಗೌಡ ಕೊಟೂರು, ನಗರಸಭೆ ಪೌರಾಯುಕ್ತ ರಾಜಾರಾಮ ಎಸ್ ಪವಾರ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಾರ್ಯ ಪಾಲಕ ಅಭಿಯಂತರ ಜಗದೀಶ ಹೊಸಮನಿ, ಅಧಿಕಾರಿಗಳಾದ ಬಸವರಾಜ ಬಳ್ಳಾರಿ, ಆನಂದ ಬದಿ, ಎಚ್ ಎ ಬಂಡಿವಡ್ಡರ ಸೇರಿದಂತೆ ಸಿಬ್ಬಂಧಿ ವರ್ಗದವರು ಹಾಗೂ ಎನ್.ಸಿ.ಸಿ ವಿಧ್ಯಾರ್ಥಿಗಳು, ನಗರಸಭೆ ಕಮ್ಯೂನಿಟಿ ಮೊಬಲ್ಶೆಜರ್‌ಗಳು, ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP