ರಾಯಚೂರು, 02 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಈಗಾಗಲೇ ಆರಂಭವಾಗಿದ್ದು, ಪ್ರತಿಯೊಬ್ಬ ನಾಗರಿಕರು ತಮ್ಮ ಕುಟುಂಬದ ಸಾಮಾಜಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಸ್ವಯಂ ಘೋಷಣೆ ಮೂಲಕವೂ ನೀಡಬಹುದಾಗಿದೆ.
ಸರ್ಕಾರ ನೀಡಿದ ಸ್ವಯಂ ಘೋಷಣೆ (ಸೆಲ್ಪ ಡಿಕ್ಲರೇಷನ್) ಅರ್ಜಿ ನಮೂನೆಯಲ್ಲಿ ಸ್ವಯಂ ಬಳಕೆದಾರರ ಕೈಪಿಡಿಯಲ್ಲಿ ತಿಳಿಸಿದಂತೆ ಜಾಗರೂಕತೆಯಿಂದ ಮಾಹಿತಿ ಭರ್ತಿ ಮಾಡಬೇಕು ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬೀನ್ ಮೊಹಪಾತ್ರ ಅವರು ತಿಳಿಸಿದ್ದಾರೆ.
ವೆಬ್‌ಸೈಟ್ ಲಿಂಕ್ URL:https://kscbcselfdeclaration.karnataka.gov.in ಮೂಲಕ ಸ್ವಯಂ ಘೋಷಣೆ ಬಳಕೆದಾರರ ಕೈಪಿಡಿ ನೋಡಬಹುದಾಗಿದೆ. ಬಳಕೆದಾರರು ಸ್ವಯಂ ಘೋಷಣೆಯೊಂದಿಗೆ ಮುಂದುವರಿಯಲು ನಾಗರಿಕ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಬಳಕೆದಾರರು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಟಿಪಿ ಪಡೆಯಬೇಕು. ಬಳಕೆದಾರರು ಲಾಗಿನ್ ಆಗಲು ಒಟಿಪಿ ನಮೂದಿಸಬೇಕು.
ಹೊಸ ಸಮೀಕ್ಷೆಯನ್ನು ಪ್ರಾರಂಭಿಸಿ ಎಂಬುದರ ಮೇಲೆ ಕ್ಲಿಕ್ ಮಾಡಬೇಕು. ಬಳಕೆದಾರರು ತಮ್ಮ ಯುಹೆಚ್‌ಐಡಿ ಅನ್ನು ನಮೂದಿಸಿ ಮತ್ತು ವೆರಿಫೈ ಯುಎಚ್‌ಐಡಿ ಕ್ಲಿಕ್ ಮಾಡಬೇಕು. ಬಳಕೆದಾರರು ಯುಹೆಚ್‌ಐಡಿ ಹೊಂದಿಲ್ಲದಿದ್ದರೆ ಐ ಡೋಂಟ್ ಹ್ಯಾವ್ ಯುಎಚ್‌ಐಡಿ ಕ್ಲಿಕ್ ಮಾಡಿ ಎಸ್ಕಾಂ ಖಾತೆ ಐಡಿ ನಮೂದಿಸಬೇಕು. ಸಮೀಕ್ಷೆಯಲ್ಲಿ ಭಾಗವಹಿಸುವವರ ಫೋಟೋ ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬೇಕು. ಬಳಕೆದಾರರು ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು.
ಪಡಿತರ ಚೀಟಿ ಆಗಿದ್ದರೆ: ಬಳಕೆದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ 'ಸಬ್‌ಮೀಟ್ ಆರ್‌ಸಿ ಇನ್ಫೋ ಮೇಲೆ ಕ್ಲಿಕ್ ಮಾಡಿ ನಂತರ ಮುಂದುವರಿಸಲು 'ಸಲ್ಲಿಸಿ' ಮೇಲೆ ಕ್ಲಿಕ್ ಮಾಡಬೇಕು.
ಆಧಾರ್ ಆಗಿದ್ದರೆ: ಬಳಕೆದಾರರು ಮನೆಯ ಮುಖ್ಯಸ್ಥರ ಆಧಾರ್ ಕಾರ್ಡನಲ್ಲಿರುವಂತೆ ಹೆಸರನ್ನು ನಮೂದಿಸಬೇಕು ಮತ್ತು ಆಧಾರ್ ಒಟಿಪಿ ಅನ್ನು ದೃಢೀಕರಿಸಿ ಮೇಲೆ ಕ್ಲಿಕ್ ಮಾಡಬೇಕು. ಬಳಕೆದಾರರು ಒಟಿಪಿ ಅಥವಾ ಫೇಸ್ ಕ್ಯಾಪ್ಟರ್ ಆಯ್ಕೆ ಮಾಡಬಹುದು. ಒಟಿಪಿ ಆಗಿದ್ದರೆ, ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಅನ್ನು ನಮೂದಿಸಬೇಕು. ಫೇಸ್ ಕ್ಯಾಪ್ಟರ್ ಆಗಿದ್ದರೆ, ಬಳಕೆದಾರರು ಸಿಇಜಿ ಫೇಸ್ ಕೆವೈಸಿ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಕ್ಯೂರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
ಬಳಕೆದಾರರು ಅಪ್ಲಿಕೇಶನ್ ಇರುವ ಫೋನ್‌ನ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಮತ್ತು ಸ್ಕ್ಯಾನ್ ಕ್ಯೂಆರ್ ಮೇಲೆ ಕ್ಲಿಕ್ ಮಾಡಬೇಕು. ಸ್ಕ್ಯಾನ್ ಮಾಡಿದ ನಂತರ, ಬಳಕೆದಾರರು ಅಪ್ಲಿಕೇಶನ್‌ನಲ್ಲಿ ಫೇಸ್ ಕ್ಯಾಪ್ಟರ್ ಅನ್ನು ಪೂರ್ಣಗೊಳಿಸಬೇಕು. ಇ ಕೆವೈಸಿ ನಂತರ ಗೇಟ್ ಡಾಟಾ ಮೇಲೆ ಕ್ಲಿಕ್ ಮಾಡಿ ಮುಂದುವರೆಸಬೇಕು. ಮನೆಯ ಮುಖ್ಯಸ್ಥರ ಇ ಕೆವೈಸಿ ನಚಿತರ ಬಳಕೆದಾರರು ಕುಟುಂಬದ ಸದಸ್ಯರನ್ನು ಸೇರಿಸಬೇಕು. ಸದಸ್ಯರನ್ನು ಸೇರಿಸಲು, ಸದಸ್ಯರನ್ನು ಸೇರಿಸಿ ಮೇಲೆ ಕ್ಲಿಕ್ ಮಾಡಿ ಮತ್ತು ಸದಸ್ಯರ ಇ-ಕೆವೈಸಿಯನ್ನ ಪೂರ್ಣಗೊಳಿಸಬೇಕು. ಸದಸ್ಯರ ಮಾಹಿತಿಯನ್ನು ಪಡಿತರ ಚೀಟಿಯಿಂದ ಪಡೆಯಲಾಗಿದ್ದರೆ ಮತ್ತು ಯಾವುದೇ ಸದಸ್ಯರು ಜೀವಂತವಾಗಿಲ್ಲದಿದ್ದರೆ, ಸದಸ್ಯರನ್ನು ಮೃತ ಎಂದು ಗುರುತಿಸಬೇಕು. ಮೃತ ಮೇಲೆ ಕ್ಲಿಕ್ ಮಾಡಿ ಖಚಿತ ಪಡಿಸಬೇಕು. ಎಲ್ಲಾ ಕುಟುಂಬದ ಸದಸ್ಯರನ್ನು ಸೇರಿಸಿದ ನಂತರ, ಮನೆಯ ಮುಖ್ಯಸ್ಥರನ್ನು ಆಯ್ಕೆಮಾಡಿ, ಮೊಬೈಲ್ ಸಂಖ್ಯೆ ಮತ್ತು ಓಟಿಪಿ ನಮೂದಿಸಿ ಸಮೀಕ್ಷೆಯನ್ನು ಪ್ರಾರಂಭಿಸಬೇಕು. ಬಳಕೆದಾರರು ಎಲ್ಲಾ ಸದಸ್ಯರಿಗೆ ವೈಯಕ್ತಿಕ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಮತ್ತು ನಂತರ ಕುಟುಂಬದ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು.
ವೈಯಕ್ತಿಕ ಸಮೀಕ್ಷೆಗಾಗಿ ಮಾದರಿ ಪ್ರಶ್ನೆಗಳು ಇರುವುದನ್ನು ಗಮನಿಸಬೇಕು. ಉಪ-ಜಾತಿ ಮತ್ತು ಜಾತಿಯ ಸಮಾನಾರ್ಥಕ ಹೆಸರುಗಳು ಐಚ್ಚಿಕ ಕ್ಷೇತ್ರಗಳಾಗಿವೆ. ಪ್ರಶ್ನಾವಳಿಯನ್ನು ಪೂರ್ಣಗೊಳಿಸಿದ ನಂತರ, ಸಲ್ಲಿಸಿ ಕ್ಲಿಕ್ ಮಾಡಬೇಕು. ಬಳಕೆದಾರರು ಸಮೀಕ್ಷೆಯನ್ನು ಸಲ್ಲಿಸುವ ಮೊದಲು ಅದರ ಪೂರ್ವವೀಕ್ಷಣೆಯನ್ನು ನೋಡಬಹುದು.
ಬಳಕೆದಾರರು ಸ್ವಯಂ ಘೋಷಣೆ ದಾಖಲೆಯ ಫೋಟೋವನ್ನು ಕ್ಲಿಕ್ ಮಾಡಿ ಅಪ್‌ಲೋಡ್ ಮಾಡಬೇಕು. ಸಲ್ಲಿಸಿದ ನಂತರ, ಬಳಕೆದಾರರಿಗೆ ಅಪ್ಲಿಕೇಶನ್ ಸಂಖ್ಯೆ ಸಿಗುತ್ತದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್