ನವದೆಹಲಿ, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಪೂರ್ವ ದೆಹಲಿಯ ಯಮುನಾಪರ್‌ನಲ್ಲಿ ನಡೆಯುವ ರಾಮಲೀಲಾ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 72 ಅಡಿ ಎತ್ತರದ ರಾವಣ ಪ್ರತಿಕೃತಿಯನ್ನು ದಹನ ಮಾಡಲಾಗುವುದು.
ಈ ರಾಮಲೀಲಾದಲ್ಲಿ ಸಾಂಪ್ರದಾಯಿಕ ರಾವಣ, ಕುಂಭಕರ್ಣ, ಮೇಘನಾದರ ಪ್ರತಿಕೃತಿಗಳೊಂದಿಗೆ ಪಹಲ್ಗಾಮ್ ಭಯೋತ್ಪಾದಕರ ಪ್ರತಿಕೃತಿ ದಹಿಸಲಾಗುತ್ತದೆ. ಭಯೋತ್ಪಾದನೆ ಮತ್ತು ರಾಕ್ಷಸ ಪ್ರವೃತ್ತಿಯ ವಿರುದ್ಧ ಯುವಜನರು ಹೋರಾಟದಿಂದಲೇ ಜಯ ಸಾಧಿಸಬೇಕು ಎಂಬ ಸಂದೇಶ ಈ ಮೂಲಕ ನೀಡಲಾಗುತ್ತದೆ ಎಂದು ಸಂಘಟಕರು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ರಾಜ್ಯ ಸಚಿವೆ ಹರ್ಷ ಮಲ್ಹೋತ್ರಾ ಹಾಗೂ ಹಲವಾರು ಚಲನಚಿತ್ರ ಗಣ್ಯರು ಭಾಗವಹಿಸುವ ನಿರೀಕ್ಷೆಯಿದ್ದು ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa