ರಾಯಚೂರು, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಾಡಿನ ಬಹುದೊಡ್ಡ ಹಬ್ಬವಾದ ನವರಾತ್ರಿ ದಸರಾ ಹಬ್ಬ ನಮ್ಮೆಲ್ಲರ ಸೌಹಾರ್ದತೆಯ ಸಂಕೇತವಾಗಿದೆ. ಕೆಡಕಿನ ಮೇಲೆ ವಿಜಯ ಸಾಧಿಸುವ ಈ ವಿಜಯ ದಶಮಿ ದಸರಾ ಹಬ್ಬದಂದು ನಾಡ ದೇವತೆಯಾದ ಶ್ರೀ ತಾಯಿ ಚಾಮುಂಡೇಶ್ವರಿ ನಾಡಿನ ಸಮಸ್ತ ಜನತೆಗೆ ಒಳಿತು ಮಾಡಲಿ ಎಂದು ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಬೋಸರಾಜು ಅವರು ಶ್ರೀದೇವಿಯಲ್ಲಿ ಪ್ರಾರ್ಥಿಸಿದರು.
ರಾಯಚೂರಿನ ಗೋಲ್ ಬಜಾರ್, ಗಣೇಶ ಕಟ್ಟೆಯ ದೇವಸ್ಥಾನ, ತುಳಜಾಭವಾನಿ, ದೇವಸ್ಥಾನ, ಹರಿಜನವಾಡದ ಸವಾರಮ್ಮ ದೇವಸ್ಥಾನ, ಸಿಯಾತಲಾಬ್ ಸೇರಿದಂತೆ ವಿವಿಧ ಬಡಾವಣೆಯಲ್ಲಿ ವಿಜೃಂಭಣೆಯಿಂದ ಆಯೋಜಿಸಿದ್ದ ದಸರಾ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ಮಹಾ ಮಂಗಳಾರುತಿ ಮೂಲಕ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ನವರಾತ್ರಿ ದಸರಾ ಹಬ್ಬವು ನಾಡು-ನುಡಿ ಸಂಸ್ಕೃತಿ, ಸೌಹಾರ್ದತೆ, ಮತ್ತು ಧಾರ್ಮಿಕ ಆಚರಣೆಗಳ ಸಂಗಮವಾಗಿದೆ. ನಾಡ ದೇವತೆ ಶ್ರೀ ತಾಯಿಯ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ. ನಮ್ಮಲ್ಲಿರುವ ಕೆಡಕು ವಿಚಾರಗಳು ತೊಲಗಿಸಿ ಶಕ್ತಿ ನೀಡಿ ನಮ್ಮಲ್ಲಿರುವ ಕನಸುಗಳನ್ನು ವಿಜಯವಾಗಿಸಲು ಕರುಣಿಸಲಿ. ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿಯೊಂದಿಗೆ ಆರೋಗ್ಯವಂತರಾಗಿಸಲಿ. ಸಮಾಜದಲ್ಲಿನ ಅಧರ್ಮ ಅಳಿಯಲ್ಲಿ ಮಾನವ ಧರ್ಮ ಉಳಿಯಲಿ ಎಂದು ವಿಶೇಷ ಪೂಜೆ ಸಲ್ಲಿಸಿದರು.
ದೇವಸ್ಥಾನಗಳಲ್ಲಿ ಆಯೋಜಿಸಿದ್ದ ಅನ್ನದಾಸೋಹ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಅನ್ನ ಬಡಿಸುವ ಮೂಲಕ ದಾಸೋಹಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮೊಹಮ್ಮದ್ ಶಾಲ, ಹಿರಿಯರಾದ ರುದ್ರಪ್ಪ ಅಂಗಡಿ , ಮಹಾನಗರ ಪಾಲಿಕೆ ಉಪ ಮಾಹಾ ಪೌರರಾದ ಸಾಜಿದ್ ಸಮೀರ್, ಪಾಲಿಕೆ ಸದಸ್ಯರಾದ ಬಿ ರಮೇಶ್, ಪಂಪಾಪತಿ, ರಾಜು ಪಟ್ಟಿ, ಗೋಪಿ, ಯುಸೂಫ್, ಈರಣ್ಣ ಭಂಡಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್