ಖಾದಿ ಭಾರತದ ಶ್ರೀಮಂತ ಪರಂಪರೆಯ ಸಂಕೇತ : ಜೋಶಿ
ಧಾರವಾಡ, 02 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಖಾದಿ ಭಾರತದ ಶ್ರೀಮಂತ ಪರಂಪರೆಯ ಸಂಕೇತವಾಗಿದ್ದು, ಸ್ಥಳೀಯ ಹಾಗೂ ಸ್ವದೇಶಿ ವಸ್ತುವಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ. ವಿಜಯದಶಮಿ ದಿನ ಧಾರವಾಡದ ಖಾದಿ ಗ್ರಾಮ ಉದ್ಯೋಗ ಘಟಕಕ್ಕೆ ಭೇಟಿ ನೀಡಿ, ವಿವಿಧ ಖಾದಿ ಬಟ್ಟೆಗಳನ್ನು ಖರೀದಿಸಿದ ಅವರು, ಪ್
Joshi


ಧಾರವಾಡ, 02 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಖಾದಿ ಭಾರತದ ಶ್ರೀಮಂತ ಪರಂಪರೆಯ ಸಂಕೇತವಾಗಿದ್ದು, ಸ್ಥಳೀಯ ಹಾಗೂ ಸ್ವದೇಶಿ ವಸ್ತುವಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ವಿಜಯದಶಮಿ ದಿನ ಧಾರವಾಡದ ಖಾದಿ ಗ್ರಾಮ ಉದ್ಯೋಗ ಘಟಕಕ್ಕೆ ಭೇಟಿ ನೀಡಿ, ವಿವಿಧ ಖಾದಿ ಬಟ್ಟೆಗಳನ್ನು ಖರೀದಿಸಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವೋಕಲ್ ಫಾರ್ ಲೋಕಲ್ ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಖಾದಿ ಬಳಕೆಯ ಮೂಲಕ ನೇಕಾರರು ಹಾಗೂ ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನ ನೀಡುವಂತೆ ಅವರು ಜನರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಧಾರವಾಡದ ಹಲವು ವಾಣಿಜ್ಯ ಅಂಗಡಿಗಳಿಗೆ ಭೇಟಿ ನೀಡಿ, ಆತ್ಮನಿರ್ಭರ ಭಾರತ ಹಾಗೂ ಮೇಕ್ ಇನ್ ಇಂಡಿಯಾ ಅಭಿಯಾನಗಳನ್ನು ಸಾಕಾರಗೊಳಿಸಲು ಸ್ವದೇಶಿ ವಸ್ತುಗಳ ಬಳಕೆಯ ಕುರಿತಾದ ಪೋಸ್ಟರಗಳನ್ನು ಅಂಟಿಸಿ ಜಾಗೃತಿ ಮೂಡಿಸಿದರು.

ಜಿ.ಎಸ್.ಟಿ ಕಡಿತದಿಂದ ವಸ್ತುಗಳ ಬೆಲೆ ತಗ್ಗಿದ್ದು, ಆಟಿಕೆಗಳಿಂದ ದಿನನಿತ್ಯದ ಅಗತ್ಯ ವಸ್ತುಗಳವರೆಗೂ ದೇಶೀಯ ಉತ್ಪನ್ನಗಳನ್ನು ಖರೀದಿಸಲು ಪ್ರೋತ್ಸಾಹ ನೀಡಲಾಗಿದೆ ಎಂದು ಅವರು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande