ಗಾಜಾಗೆ ತೆರಳುತ್ತಿದ್ದ ಬೆಂಗಾವಲು ಪಡೆ ತಡೆದ ಇಸ್ರೇಲ್
ಟೆಲ್ ಅವಿವ್, 02 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗಾಜಾಗೆ ಮಾನವೀಯ ನೆರವು ಸಾಗಿಸುತ್ತಿದ್ದ ದಿ ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ಎಂಬ 47 ಸಣ್ಣ ಹಡಗುಗಳ ಬೆಂಗಾವಲು ಪಡೆಯನ್ನು ಇಸ್ರೇಲಿ ನೌಕಾಪಡೆ ತಡೆದಿದೆ. ಈ ಹಡಗುಗಳಲ್ಲಿ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಹಲವಾರು ಮಾನವ ಹಕ
Arrest


ಟೆಲ್ ಅವಿವ್, 02 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗಾಜಾಗೆ ಮಾನವೀಯ ನೆರವು ಸಾಗಿಸುತ್ತಿದ್ದ ದಿ ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ ಎಂಬ 47 ಸಣ್ಣ ಹಡಗುಗಳ ಬೆಂಗಾವಲು ಪಡೆಯನ್ನು ಇಸ್ರೇಲಿ ನೌಕಾಪಡೆ ತಡೆದಿದೆ. ಈ ಹಡಗುಗಳಲ್ಲಿ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಹಲವಾರು ಮಾನವ ಹಕ್ಕು ಹೋರಾಟಗಾರರು ಇದ್ದರು.

ಇಸ್ರೇಲಿ ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ದೋಣಿಗಳನ್ನು ಸುರಕ್ಷಿತವಾಗಿ ತಡೆದು ಬಂದರಿಗೆ ಕರೆದೊಯ್ಯಲಾಗಿದೆ. ಬಂಧನದ ವೇಳೆ ಯಾರಿಗೂ ಅಪಾಯವಾಗಿಲ್ಲವೆಂದು ಸಚಿವಾಲಯ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಇಸ್ರೇಲ್ ಬಿಡುಗಡೆ ಮಾಡಿದ ವೀಡಿಯೊದಲ್ಲಿ, ಥನ್‌ಬರ್ಗ್ ಅವರನ್ನು ಬಂಧಿಸುತ್ತಿರುವ ದೃಶ್ಯಗಳು ದಾಖಲಾಗಿವೆ.

ಇಸ್ರೇಲ್ ಹೇಳಿಕೆಯಂತೆ, ಫ್ಲೋಟಿಲ್ಲಾ ಕಾನೂನುಬದ್ಧ ನೌಕಾ ದಿಗ್ಬಂಧನವನ್ನು ಉಲ್ಲಂಘಿಸಿ ಸಕ್ರಿಯ ಯುದ್ಧ ವಲಯದತ್ತ ಸಾಗುತ್ತಿತ್ತು. ಗಾಜಾಗೆ ನೆರವು ನೀಡಲು ಸುರಕ್ಷಿತ ಮಾರ್ಗಗಳನ್ನು ಬಳಸುವಂತೆ ತಾವು ಪುನಃಪುನಃ ಕೇಳಿಕೊಂಡಿದ್ದರೂ ಫ್ಲೋಟಿಲ್ಲಾ ಅದನ್ನು ನಿರ್ಲಕ್ಷಿಸಿದೆ ಎಂದು ಇಸ್ರೇಲ್ ಆರೋಪಿಸಿದೆ.

ಇಸ್ರೇಲ್, ಇಟಲಿ ಮತ್ತು ಗ್ರೀಸ್ ಮಾನವೀಯ ನೆರವು ತಲುಪಿಸಲು ಶಾಂತಿಯುತ ಮಾರ್ಗ ಒದಗಿಸಲು ಸಿದ್ಧರಾಗಿದ್ದರು. ಆದರೆ “ಫ್ಲೋಟಿಲ್ಲಾ ಪ್ರಚೋದನೆಗೆ ಹೆಚ್ಚು ಆಸಕ್ತಿ ತೋರಿತು, ಸಹಾಯಕ್ಕೆ ಅಲ್ಲ” ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಆರೋಪಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande