ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಣೆ
ಹಾಸನ, 02 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹಾಸನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ
ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ವಿತರಣೆ


ಹಾಸನ, 02 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹಾಸನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು, ಸ್ವಾತಂತ್ಯ ಚಳುವಳಿ, ಸರಳತೆ, ಅಹಿಂಸಾ ಮಾರ್ಗ ಅಸ್ಪೃಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ/ಸ್ನಾತಕೊತ್ತರ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 3000/-, ದ್ವಿತೀಯ ಬಹುಮಾನ 2000/-, ತೃತೀಯ ಬಹುಮಾನ 1000/- ರೂ. ನಗದು ಬಹುಮಾನನ್ನು ಇಂದು ನಗರದ ಗಾಂಧಿ ಭವನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಪ್ರೌಢಶಾಲಾ ವಿಭಾಗದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು ಉದಯಪುರದ ಕೆ.ಪಿ.ಎಸ್ ಶಾಲೆಯ ನಿತ್ಯ ಪ್ರಥಮ ಬಹುಮಾನ, ಆಲೂರು ತಾಲ್ಲೂಕು ಕಣತ್ತೂರಿನ ಕಿರಣ್ ಆಂಗ್ಲ ಮಾಧ್ಯಮ ಶಾಲೆಯ (ಪ್ರೌಢ ಶಾಲಾ ವಿಭಾಗದ) ಗ್ರೀಷ್ಮಾ ದ್ವೀತಿಯ ಬಹುಮಾನ, ಬೇಲೂರು ತಾಲ್ಲೂಕಿನ ಸರ್ವೋದಯ ಪ್ರೌಢ ಶಾಲೆಯ ಆದಿತ್ಯ ಗೌಡ ವಿ ತೃತೀಯ ಬಹುಮಾನ ನೀಡಲಾಯಿತು.

ಪದವಿ ಪೂರ್ವ ವಿಭಾಗದಲ್ಲಿ ಹಾಸನದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕುಮಾರಿ ಜಿ.ಜೆ ಪ್ರಥಮ ಬಹುಮಾನ, ಹಾಸನದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸುಹಾಸ್ ಐ.ಆರ್ ದ್ವಿತೀಯ ಬಹುಮಾನ, ಹಾಸನದ ಮಾಸ್ರ‍್ಸ್ ಪಿ.ಯು ಕಾಲೇಜಿನ ಲಿಪಿಕ ಹೆಚ್.ಸಿ ತೃತೀಯ ಬಹುಮಾನ ನೀಡಲಾಯಿತು.

ಪದವಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ಹೊಳೆನರಸೀಪುರ ತಾಲ್ಲೂಕು ಪಡವಲಹಿಪ್ಪೆಯ ಹೆಚ್.ಡಿ ದೇವೇಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಶ್ಮೀತ ಎಸ್.ಆರ್ ಪ್ರಥಮ ಬಹುಮಾನ, ಚನ್ನರಾಯಪಟ್ಟಣ ತಾಲ್ಲೂಕಿನ ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೇ ಕಾಲೇಜಿನ ಭವ್ಯಶ್ರೀ ದ್ವಿತೀಯ ಬಹುಮಾನ, ಹಾಸನದ ಕುವೆಂಪು ಪ್ರಥಮ ದರ್ಜೇ ಕಾಲೇಜಿನ ಕೆ.ಆರ್ ಸೌಮ್ಯ ಅವರಿಗೆ ತೃತೀಯ ಬಹುಮಾನವನ್ನು ವಿತರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande