ವಿಜಯಪುರ, 02 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಭೀಮಾತೀರದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ ಬಿರಾದಾರ್ ಮೇಲೆ ಗುಂಡಿಕ್ಕಿ ಹತ್ಯೆ ನಂತರ ಇದೀಗ ಆತನ ಅಪ್ರಾಪ್ತ ಪುತ್ರನ ಅಪಹರಣಕ್ಕೆ ಯತ್ನಿಸಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದ ಹೊರ ಭಾಗದ ತೋಟದಲ್ಲಿ ನಡೆದಿದೆ.
ಹತ್ಯೆಯಾಗಿರುವ ಭೀಮನಗೌಡ ನಿವಾಸದಲ್ಲಿ ಬನ್ನಿ ವಿನಿಮಯ ಮಾಡಲು ಬಂದಿದ್ದ ಸುನೀಲ್ ಎಂಬಾತನಿಂದ ಅಪಹರಣ ಮಾಡುವ ಯತ್ನ ನಡೆದಿದೆ.
ನಿನ್ನ ಅಪ್ಪನನ್ನು ನಾವೇ ಮರ್ಡರ್ ಮಾಡಿದ್ದೇವೆ. ನಿನ್ನನ್ನು ಮರ್ಡರ್ ಮಾಡುತ್ತೇವೆಂದು ಅಪ್ರಾಪ್ತ ಬಾಲಕನನ್ನು ಅಪಹರಣ ಮಾಡಲು ಸುನೀಲ್ ಮುಂದಾಗಿದ್ದಾನೆ.
ಸುನೀಲನಿಂದ ಅಪ್ರಾಪ್ತನ್ನು ಭೀಮನಗೌಡ ಕುಟುಂಬದವರು ರಕ್ಷಿಸಿದ್ದಾರೆ.
ಘಟನೆ ಬಳಿಕ ಅಲ್ಲಿಂದ ಸುನೀಲ ಪರಾರಿಯಾಗಿದ್ದಾನೆ. ಘಟನೆ ಖಂಡಿಸಿ ಚಡಚಣ ಕ್ರಾಸ್ ಬಳಿ ಕುಟುಂಬಸ್ಥರು, ಸ್ಥಳೀಯರು ಪ್ರತಿಭಟನೆ ನಡೆಸಿದರು.
ರಸ್ತೆ ಮೇಲೆ ಟೈರ್ ಇಟ್ಟು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಭೀಮನಗೌಡ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿ, ಆರೋಪಿ ಸುನೀಲನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande