ವಿಜಯಪುರ, 18 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರೋಣ ಚಲನಚಿತ್ರ ನ. ೭ ರಂದು ತೆರೆಗೆ ಬರಲಿದ್ದು, ಚಲನಚಿತ್ರದ ದುರ್ಗಾದೇವಿ ಕುರಿತಾದ ಹಾಡನ್ನು ಅ.೧೯ ರಂದು ದರಬಾರ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಈ ಹಾಡನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಚಲನಚಿತ್ರದ ನಿರ್ಮಾಪಕ ಮಾಲೂರ ವಿಜಯ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ ಭಾಗದ ಎಲ್ಲ ಕಲಾವಿದರ ಸಂಗಮದ0ತಿರುವ ರೋಣ ಚಿತ್ರ ಸಾಹಸ, ಮನೋರಂಜನೆ, ಪ್ರೀತಿ ಪ್ರೇಮ ಹೀಗೆ ಎಲ್ಲ ವಿಷಯ ವ್ಯಾಪ್ತಿ ಹೊಂದಿದ್ದು ಗ್ರಾಹಕರಿಗೆ ಪೈಸಾ ವಸೂಲ್ ಆಗುವುದು ಖಾತರಿಯಾಗುವುದು ಎಂದರು.
ನ. ೭ ಕ್ಕೆ ತೆರೆಗೆ ಬರಲಿರುವ ರೋಣ ಚಿತ್ರದಲ್ಲಿರುವ ದುರ್ಗಾದೇವಿ ಹಾಡುಗಳನ್ನು ದರಬಾರ ಹೈಸ್ಕೂಲ ಮೈದಾನದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬಿಡುಗಡೆಗೊಳಿಸಲಿದ್ದಾರೆ. ವಿಜಯಪುರ ಎಂಬುದು ಎಲ್ಲರಿಗೂ ವಿಜಯೋತ್ಸವ ಇದ್ದಂತೆ, ಹಾಗಾಗಿ ಇಲ್ಲಿಂದಲೇ ವಿಜಯಯಾತ್ರೆ ಆರಂಭಿಸುತ್ತಿದ್ದೇವೆ ಎಂದರು.
ರೋಣ ಚಿತ್ರದ ನಿರ್ದೇಶಕ ಸತೀಶಕುಮಾರ ಮಾತನಾಡಿ, ಈ ಚಿತ್ರದಲ್ಲಿ ಪೊಲಿಟಿಕಲ್ ಡ್ರಾಮಾ, ತಂದೆ- ಮಗನ ಬಾಂಧವ್ಯ, ಸ್ನೇಹಿತರ, ಸಂಬ0ಧಿಕರ ಪಾತ್ರ, ಸಾಹಸಮಯ ದೃಶ್ಯಗಳಿವೆ, ಚಿತ್ರಗಳಗಲ್ಲಿ ಬರುವ ಪಾತ್ರಗಳು ಎಲ್ಲರಿಗೂ ತಮ್ಮ ಸುತ್ತಮುತ್ತಲಿನ ಘಟನೆಗಳನ್ನು ನೆನಪಿಸುತ್ತವೆ ಎಂದರು.
ರೋಣ ಚಿತ್ರದ ನಾಯಕ ರಘುರಾಜನ ಮಾತನಾಡಿ, ನಾಯಕಿಯಾಗಿ ಪ್ರಕೃತಿ ಪ್ರಸಾದ ಅವರು ಅಭಿನಯಿಸಿದ್ದಾರೆ. ಹಿರಿಯ ನಟರಾದ ಅವಿನಾಶ ಸೇರಿದಂತೆ ಹಲವಾರು ನಟರ ತಾರಾಗಣವೇ ಚಿತ್ರದಲ್ಲಿದೆ ಎಂದರು. ಚಿತ್ರ ತಂಡದ ಗೀತಾ, ಮನೋಜ, ಆದೀಶ್ವರ ಇದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande