ನವದೆಹಲಿ, 16 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮಾನವ ಹಕ್ಕುಗಳ ರಕ್ಷಣೆಯು ಕೇವಲ ಕಾನೂನು ಬಾಧ್ಯತೆಯಲ್ಲ, ಅದು ಭಾರತೀಯ ಜೀವನ ವಿಧಾನದ ನೈತಿಕ ಮತ್ತು ಆಧ್ಯಾತ್ಮಿಕ ಕಡ್ಡಾಯ ಆಗಿದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ 32ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ವೇದಗಳು ಮತ್ತು ಉಪನಿಷತ್ತುಗಳಲ್ಲಿ ಮಾನವೀಯತೆಯ ಏಕತೆ ಮತ್ತು ಜೀವಿಯ ಪಾವಿತ್ರ್ಯದ ಬೋಧನೆಗಳು ಆಧುನಿಕ ಮಾನವ ಹಕ್ಕುಗಳ ಪರಿಕಲ್ಪನೆಗೂ ಮುಂಚೆ ನಮ್ಮ ಸಂಸ್ಕೃತಿಯಲ್ಲಿ ಅಡಕವಾಗಿವೆ ಎಂದರು.
ಬಂಧನದಲ್ಲಿರುವವರ ಮೇಲೆ ಹಿಂಸೆ ಅಥವಾ ಅಮಾನವೀಯ ವರ್ತನೆ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಎಚ್ಚರಿಸಿದ ಅವರು, ಜೈಲುಗಳನ್ನು ಸುಧಾರಣೆ ಮತ್ತು ಪುನರ್ವಸತಿ ಕೇಂದ್ರಗಳಾಗಿ ಪರಿವರ್ತಿಸಬೇಕೆಂದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa