ಬೆಂಗಳೂರು, 15 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಿಷಭ್ ಶೆಟ್ಟಿ ನಿರ್ದೇಶನದ ಮತ್ತು ಅಭಿನಯದ “ಕಾಂತಾರ ಅಧ್ಯಾಯ 1” ಗಲ್ಲಾಪೆಟ್ಟಿಗೆ ಗಳಿಕೆಯಲ್ಲಿ ತನ್ನ ದಾಖಲೆ ಮುಂದುವರೆಸಿದೆ.
ವಾರಾಂತ್ಯ ಮಾತ್ರವಲ್ಲದೆ ಇತರ ದಿನಗಳಲ್ಲಿಯೂ ಚಿತ್ರದ ಗಳಿಕೆ ನಿರಂತರವಾಗಿ ಏರುತ್ತಿದೆ. ಬಿಡುಗಡೆಯಾದ ಎರಡನೇ ಭಾನುವಾರದವರೆಗೆ ಸಿನಿಮಾ ಭಾರತದಲ್ಲಿ 438 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈಗ ಸಿನಿಮಾ ಸೋಮವಾರ ಹಾಗೂ ಮಂಗಳವಾರ ಉತ್ತಮ ಗಳಿಕೆ ಮಾಡಿದೆ.
ಸೋಮವಾರ ಸಿನಿಮಾ 13.35 ಕೋಟಿ ರೂಪಾಯಿ ಗಳಿಸಿದೆ. ಇನ್ನು, ಮಂಗಳವಾರ 13.50 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ 465 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಚಿತ್ರಕ್ಕೆ 500 ಕೋಟಿ ರೂಪಾಯಿ ಕ್ಲಬ್ ಸೇರಲು ಬೇಕಿರೋದು ಕೇವಲ 35 ಕೋಟಿ ರೂಪಾಯಿ ಮಾತ್ರ. ವಾರಾಂತ್ಯದೊಳಗೆ ಸಿನಿಮಾ 500 ಕೋಟಿ ರೂಪಾಯಿ ಕ್ಲಬ್ ಸೇರುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa