ನವದೆಹಲಿ, 15 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೇಶೀಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ದಾಖಲೆಯ ಏರಿಕೆ ಇಂದು ಕೂಡ ಮುಂದುವರಿದಿದೆ.
ಇಂದಿನ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ₹2,700 ರಿಂದ ₹2,950ರವರೆಗೆ ಏರಿಕೆಯಾಗಿದೆ. ಬೆಳ್ಳಿಯ ದರ ಕೂಡ ಪ್ರತಿ ಕಿಲೋಗ್ರಾಂಗೆ ₹4,000ರಷ್ಟು ಏರಿಕೆ ಕಂಡು, ಹೊಸ ಗರಿಷ್ಠ ಮಟ್ಟ ತಲುಪಿದೆ.
ದೇಶಾದ್ಯಂತದ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ₹1,28,360 ರಿಂದ ₹1,28,510ರವರೆಗೆ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ₹1,17,660 ರಿಂದ ₹1,17,810ರವರೆಗೆ ವಹಿವಾಟು ನಡೆಸುತ್ತಿದೆ. ದೆಹಲಿಯಲ್ಲಿ ಬೆಳ್ಳಿ ಪ್ರತಿ ಕಿಲೋಗ್ರಾಂಗೆ ₹1,89,100ಗೆ ಮಾರಾಟವಾಗಿದೆ.
ಮುಂಬೈ, ಅಹಮದಾಬಾದ್, ಚೆನ್ನೈ, ಕೋಲ್ಕತ್ತಾ, ಲಕ್ನೋ, ಪಾಟ್ನಾ ಮತ್ತು ಜೈಪುರ ಸೇರಿ ಪ್ರಮುಖ ನಗರಗಳಲ್ಲೂ ಚಿನ್ನದ ಬೆಲೆಗಳು ಒಂದೇ ಹಾದಿಯಲ್ಲಿದ್ದು, ಎಲ್ಲೆಡೆ ಏರಿಕೆಯ ಧಾಟಿ ಮುಂದುವರಿದಿದೆ. ಕರ್ನಾಟಕ, ತೆಲಂಗಾಣ ಹಾಗೂ ಒಡಿಶಾದ ರಾಜಧಾನಿಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರದಲ್ಲೂ ಚಿನ್ನದ ಬೆಲೆ 24 ಕ್ಯಾರೆಟ್‌ಗೆ ₹1,28,360 ಮತ್ತು 22 ಕ್ಯಾರೆಟ್‌ಗೆ ₹1,17,660 ಏರಿಕೆ ದಾಖಲಾಗಿದೆ.
ಆರ್ಥಿಕ ವಿಶ್ಲೇಷಕರು ಹೇಳುವಂತೆ, ಅಂತಾರಾಷ್ಟ್ರೀಯ ಮಾರುಕಟ್ಟೆಯ ತೀವ್ರ ಬೇಡಿಕೆ, ಅಮೆರಿಕನ್ ಡಾಲರ್ ಬಲಹೀನತೆ ಹಾಗೂ ಹೂಡಿಕೆದಾರರ ಸುರಕ್ಷಿತ ಹೂಡಿಕೆಯ ಹಾದಿ ಚಿನ್ನದತ್ತ ತಿರುಗಿರುವುದು ಈ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa