ಗದಗ ನಗರಕ್ಕೆ ಆಗಮಿಸಿದ ವಿಜಯ ಜ್ಯೋತಿಗೆ ಜಿಲ್ಲಾಧಿಕಾರಿಗಳಿಂದ ಅದ್ದೂರಿ ಸ್ವಾಗತ
ಗದಗ, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕಿತ್ತೂರು ಉತ್ಸವದ ಪ್ರಯುಕ್ತ ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಗೆ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಸ್ವಾಗತಿಸಿ ಪೂಜೆ ಸಲ್ಲಿಸಿದರು.ಕಿತ್ತೂರ ಚೆನ್ನಮ್ಮಾ ವಿಜಯ ಜ್ಯೋತಿಗೆ ಸ್ವಾಗತಿಸಿ, ರಥದಲ
ಪೋಟೋ


ಗದಗ, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕಿತ್ತೂರು ಉತ್ಸವದ ಪ್ರಯುಕ್ತ ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಗೆ ಮಂಗಳವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಅವರು ಸ್ವಾಗತಿಸಿ ಪೂಜೆ ಸಲ್ಲಿಸಿದರು.ಕಿತ್ತೂರ ಚೆನ್ನಮ್ಮಾ ವಿಜಯ ಜ್ಯೋತಿಗೆ ಸ್ವಾಗತಿಸಿ, ರಥದಲ್ಲಿದ್ದ ರಾಣಿ ಚೆನ್ನಮ್ಮ ಪುತ್ಥಳಿಗೆ ಪುಷ್ಪಹಾರ ಅರ್ಪಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ನಗರದ ಪ್ರವಾಸಿ ಮಂದಿರದಿಂದ ವೀರಜ್ಯೋತಿ ಮೆರವಣಿಗೆಯು ಆರಂಭವಾಗಿ ಮುಳಗುಂದ ನಾಕಾ, ಎಸಿ ಕಚೇರಿ ಮೂಲಕ ಕಲಾ ತಂಡಗಳೊಂದಿಗೆ ಸಾಗಿದ ವಿಜಯ ಜ್ಯೋತಿ ಯಾತ್ರೆ ಕಿತ್ತೂರ ಚನ್ನಮ್ಮ ವೃತ್ತ ತಲುಪಿ ಮುಂದೆ ಸಾಗಿತು.

ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಅಕ್ಟೋಬರ್ 23 ರಿಂದ 25 ರವರೆಗೆ ನಡೆಯಲಿರುವ ಕಿತ್ತೂರು ಉತ್ಸವ ಪ್ರಯುಕ್ತ ರಾಜ್ಯದಾದ್ಯಂತ ಸಂಚರಿಸುವ ಈ ವಿಜಯ ಜ್ಯೋತಿ ಯಾತ್ರೆ ಹಾವೇರಿ ಜಿಲ್ಲೆಯಿಂದ ಗದಗ ಜಿಲ್ಲೆಗೆ ತಲುಪಿದ್ದು, ಲಕ್ಕುಂಡಿ ಮಾರ್ಗವಾಗಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಬಿಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್ ಸಾಬ್ ಬಬರ್ಜಿ, ಗಣ್ಯರಾದ ಸಿದ್ದಪ್ಪ ಪಲ್ಲೇದ, ಎಮ್. ಎಸ್. ಕರಿಗೌಡರ್,ವಿಜಯಕುಮಾರ್ ಗಡ್ಡಿ, ಈರಣ್ಣ ಕರಿಬಿಷ್ಟಿ, ನಾಗರಾಜ ತುಪ್ಪದ, ಹಿರೇಮನಿ ಪಾಟೀಲ, ಫಕೀರಪ್ಪ ಮರಿಗೌಡ್ರ, ಮಹೇಶ ಕರಿಬಿಷ್ಟಿ, ಜೀವನಗೌಡ್ರ, ಹಂಚಿನಾಳ, ಈರಮ್ಮ, ವಸಂತ ಪಡಗದ, ಅಶೋಕ ಸಂಕಣ್ಣವರ, ಅಯ್ಯಪ್ಪ ಅಂಗಡಿ, ಸಿದ್ದು ನಾಲ್ವಾಡ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ.ನಂದಾ ಹಣಬರಟ್ಟಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಸವರಾಜ ಬಳ್ಳಾರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ತಹಶೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ರಾಜು ಕಂಟಿಗೊಣ್ಣವರ, ಶ್ರೀಧರ್ ಚಿನಗುಂಡಿ, ಪಾರ್ವತಿಮಠ, ರಾಜು ಸೋಪಡ್ಲ ಮತ್ತಿತರರು ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande