ನಾರ್ವೆ, ಆಸ್ಟ್ರೇಲಿಯಾ ರಾಯಭಾರ ಕಚೇರಿಗಳನ್ನು ಮುಚ್ಚಲು ವೆನೆಜುವೆಲಾ ನಿರ್ಧಾರ
ಕ್ಯಾರಕಾಸ್, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ವೆನೆಜುವೆಲಾದ ಸರ್ಕಾರ ನಾರ್ವೆ ಮತ್ತು ಆಸ್ಟ್ರೇಲಿಯಾದಲ್ಲಿರುವ ತನ್ನ ರಾಯಭಾರ ಕಚೇರಿಗಳನ್ನು ಮುಚ್ಚಿ, ಬದಲಾಗಿ ಬುರ್ಕಿನಾ ಫಾಸೊ ಮತ್ತು ಜಿಂಬಾಬ್ವೆಗಳಲ್ಲಿ ಹೊಸ ರಾಯಭಾರ ಕಚೇರಿಗಳನ್ನು ತೆರೆಯುವುದಾಗಿ ಘೋಷಿಸಿದೆ. ಅಮೆರಿಕದೊಂದಿಗೆ ಉದ್ವಿಗ್ನತೆ ಹೆಚ್
ನಾರ್ವೆ, ಆಸ್ಟ್ರೇಲಿಯಾ ರಾಯಭಾರ ಕಚೇರಿಗಳನ್ನು ಮುಚ್ಚಲು ವೆನೆಜುವೆಲಾ ನಿರ್ಧಾರ


ಕ್ಯಾರಕಾಸ್, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ವೆನೆಜುವೆಲಾದ ಸರ್ಕಾರ ನಾರ್ವೆ ಮತ್ತು ಆಸ್ಟ್ರೇಲಿಯಾದಲ್ಲಿರುವ ತನ್ನ ರಾಯಭಾರ ಕಚೇರಿಗಳನ್ನು ಮುಚ್ಚಿ, ಬದಲಾಗಿ ಬುರ್ಕಿನಾ ಫಾಸೊ ಮತ್ತು ಜಿಂಬಾಬ್ವೆಗಳಲ್ಲಿ ಹೊಸ ರಾಯಭಾರ ಕಚೇರಿಗಳನ್ನು ತೆರೆಯುವುದಾಗಿ ಘೋಷಿಸಿದೆ.

ಅಮೆರಿಕದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಿದೇಶಾಂಗ ಸೇವಾ ಪುನರ್‌ರಚನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ಅಧ್ಯಕ್ಷ ನಿಕೋಲಸ್ ಮಡುರೊ ಅವರ ಸರ್ಕಾರದ ಹೇಳಿಕೆಯ ಪ್ರಕಾರ, ಈ ಮುಚ್ಚುವಿಕೆ “ಸಂಪನ್ಮೂಲಗಳ ಕಾರ್ಯತಂತ್ರದ ಮರುಹಂಚಿಕೆ”ಯ ಭಾಗವಾಗಿದೆ. ನಾರ್ವೆ ಮತ್ತು ಆಸ್ಟ್ರೇಲಿಯಾದಲ್ಲಿನ ವೆನೆಜುವೆಲಾ ಪ್ರಜೆಗಳಿಗೆ ಕೌನ್ಸುಲರ್ ಸೇವೆಗಳನ್ನು ಹತ್ತಿರದ ಇತರ ರಾಜತಾಂತ್ರಿಕ ಕಚೇರಿಗಳ ಮೂಲಕ ಒದಗಿಸಲಾಗುವುದು.

ಹೊಸ ಕಚೇರಿಗಳು ಬುರ್ಕಿನಾ ಫಾಸೊ ಮತ್ತು ಜಿಂಬಾಬ್ವೆಗಳಲ್ಲಿ ಸ್ಥಾಪನೆಯಾಗಲಿದ್ದು, ಕೃಷಿ, ಇಂಧನ, ಶಿಕ್ಷಣ ಹಾಗೂ ಗಣಿಗಾರಿಕೆ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಉದ್ದೇಶದಿಂದ ಜಂಟಿ ಯೋಜನೆಗಳನ್ನು ಆರಂಭಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

ಈ ಘೋಷಣೆ ನೊಬೆಲ್ ಶಾಂತಿ ಪ್ರಶಸ್ತಿ 2025ನ್ನು ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊಗೆ ನೀಡಿದ ಕೆಲವೇ ಗಂಟೆಗಳ ಬಳಿಕ ಪ್ರಕಟವಾಗಿದ್ದು, ರಾಜತಾಂತ್ರಿಕ ವಲಯದಲ್ಲಿ ಗಮನ ಸೆಳೆದಿದೆ. ಅಮೆರಿಕ ತನ್ನ ಸರ್ಕಾರದ ವಿರುದ್ಧ ಸೈನಿಕ ಹಾಗೂ ರಾಜತಾಂತ್ರಿಕ ಒತ್ತಡ ತರುತ್ತಿದೆ ಎಂದು ಮಡುರೊ ಆರೋಪಿಸಿದ್ದಾರೆ.

ರಷ್ಯಾ ಬೆಂಬಲಿತ ಜಿಂಬಾಬ್ವೆ ಮತ್ತು ಬುರ್ಕಿನಾ ಫಾಸೊ ರಾಷ್ಟ್ರಗಳೊಂದಿಗೆ ವೆನೆಜುವೆಲಾ ಹೊಸ ಸಹಕಾರ ಪ್ರಾರಂಭಿಸಲು ಮುಂದಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande