ಹೊಸಪೇಟೆ , 14 ಅಕ್ಟೋಬರ್ (ಹಿ.ಸ.)
ಆ್ಯಂಕರ್ : ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ರಾತ್ರಿ 9 ಗಂಟೆಗೆ ಹಂಪಿಯ ಜಂಗಲ್ ಲಾಡ್ಜ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡುವರು.
ನಾಳೆ ಬೆ.8:30 ಕ್ಕೆ ವಿಶ್ವವಿಖ್ಯಾತ ಹಂಪಿಯ ಶ್ರೀವಿರೂಪಾಕ್ಷ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು. ಬೆ.9:15 ಕ್ಕೆ ಹಂಪಿಯಿಂದ ಕೊಪ್ಪಳ ಜಿಲ್ಲೆಯ ಮೆತಗಲ್ ಗ್ರಾಮಕ್ಕೆ ಭೇಟಿ ನೀಡುವರು. ಮಧ್ಯಾಹ್ನ 2.30 ಕ್ಕೆ ಹಂಪಿ ಜಂಗಲ್ ಲಾಡ್ಜ್ ರೆಸಾರ್ಟ್ ಗೆ ಆಗಮಿಸಿ ನಂತರ ಮಧ್ಯಾಹ್ನ 3 ಗಂಟೆಗೆ ಹೊಸಪೇಟೆಯ ಹೊಟೇಲ್ ಮಲ್ಲಿಗೆಯಲ್ಲಿ ಆಯೋಜಿಸಿರುವ ಪಿಎಂಐಎಸ್ ಇಂಟರ್ನಿಗಳೊಂದಿಗೆ ಸಂವಹನ ನಡೆಸಿ ಹಂಪಿಯ ಜಂಗಲ್ ಲಾಡ್ಜ್ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡುವರು.
ಅ.17 ರಂದು ಬೆ.10:30 ಕ್ಕೆ ಬಳ್ಳಾರಿಯಿಂದ ಕೂಡ್ಲಿಗಿ ತಾಲೂಕಿನ ಕಸಾಪುರ ಗ್ರಾಮಕ್ಕೆ ಭೇಟಿ ನೂತನ ರೈತರ ತರಬೇತಿ ಕೇಂದ್ರ ಮತ್ತು ಸಂಸ್ಕರಣಾ ಘಟಕ ಉದ್ಘಾಟನೆ ನೆರವೇರಿಸುವರು. ಬೆ.11:30 ಕ್ಕೆ ಕಸಾಪುರ ಗ್ರಾಮದಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಸುವರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್