ಗದಗ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಬೆಟಗೇರಿ ಪ್ರದೇಶದಲ್ಲಿ ಮೂಖ ಹಾಗೂ ಮಾನಸಿಕ ಅಸ್ವಸ್ಥನಾಗಿರುವ ಬಾಲಕನ ಅಪಹರಣ ಪ್ರಕರಣ ದಾಖಲಾಗಿದೆ. ಬೆಟಗೇರಿ ಶಿವನಾಗನಗರದ ನಿವಾಸಿ ರೇಣವ್ವ ವಡ್ಡರ ಅವರ ಮಗ ಅರ್ಜುನ (14) ಅಕ್ಟೋಬರ್ 5ರಂದು ಮಧ್ಯಾಹ್ನದ ವೇಳೆಗೆ ಮನೆ ಮುಂದೆ ಆಟವಾಡುತ್ತಿದ್ದಾಗ ಯಾರೋ ಅಪರಿಚಿತರು ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎಂದು ಫಿರ್ಯಾದಿಯಾಗಿದೆ.
ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂ.120/2025, ಕಲಂ 137(2) ಬಿ.ಎನ್.ಎಸ್–2023ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅರ್ಜುನನು 4 ಅಡಿ 6 ಇಂಚು ಎತ್ತರದ, ಸಾಧಾರಣ ಮೈಕಟ್ಟು, ಕೋಲುಮುಖ, ಸಾದುಗಪ್ಪು ಮೈಬಣ್ಣ, ಕಪ್ಪು ಕೂದಲು ಮತ್ತು ಕಪ್ಪು ಕಣ್ಣು ಹೊಂದಿರುತ್ತಾನೆ. ಅಪಹರಣವಾಗುವ ಸಮಯದಲ್ಲಿ ಬೂದು ಬಣ್ಣದ ಅರ್ಧತೋಳಿನ ಟಿ–ಶರ್ಟ್ ಮತ್ತು ಕಂದು ಬಣ್ಣದ ಚಡ್ಡಿ ಧರಿಸಿದ್ದಾನೆ. ಅವನು ಹುಟ್ಟಿನಿಂದಲೇ ಮೂಖನಾಗಿರುವುದರಿಂದ ಮಾತನಾಡಲು ಸಾಧ್ಯವಿಲ್ಲ.
ಅಪಹರಣವಾದ ಬಾಲಕನ ಪತ್ತೆಗೆ ಸಹಕರಿಸಲು ಸಾರ್ವಜನಿಕರನ್ನು ಪೊಲೀಸರು ವಿನಂತಿಸಿದ್ದಾರೆ. ಯಾರಾದರೂ ಆ ಬಾಲಕನ ಬಗ್ಗೆ ಸುಳಿವು ನೀಡಬಲ್ಲವರಾದರೆ, ಬೆಟಗೇರಿ ಪೊಲೀಸ್ ಠಾಣೆ (08372-246333), ಪಿ.ಎಸ್.ಐ. (9480804449) ಅಥವಾ ಗದಗ ಕಂಟ್ರೋಲ್ ರೂಮ್ (08372-238300 / 9480804400) ಗೆ ತಕ್ಷಣ ಸಂಪರ್ಕಿಸಲು ಕೋರಲಾಗಿದೆ
ಹಿಂದೂಸ್ತಾನ್ ಸಮಾಚಾರ್ / lalita MP