ಬಳ್ಳಾರಿ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮುನಿರಬಾದ ಪವರ್ ಹೌಸ್ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಕ್ಟೋಬರ್ 15 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೋಣಿಮಲೈ 110/33/11 ಕೆವಿ ಮತ್ತು ಸಂಡೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಗ್ರಾಮಪಂಚಾಯತಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಸಂಡೂರು ಪಟ್ಟಣ ಸೇರಿದಂತೆ ಕೃಷ್ಣನಗರ, ಸುಶೀಲಾನಗರ, ಯಶವಂತನಗರ ಐಪಿಸೆಟ್ ಹಾಗೂ ಸಂಡೂರು ಪಟ್ಟಣದ ಸೀನ್ ಬಸಪ್ಪ ಕ್ಯಾಂಪ್, ನಂದಿಹಳ್ಳಿ, ಕಮತೂರು ನಾರಾಯಣಪುರ ಮತ್ತು ರಣಜಿತ್‌ಪುರ, ಭುಜಂಗನಗರ, ದೇವಗಿರಿ, ನರಸಿಂಗಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಎನ್.ಜೆ.ವೈ ಮತ್ತು ಐ.ಪಿ.ಸೆಟ್ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಜೆಸ್ಕಾಂನೊಂದಿಗೆ ಸಹಕರಿಸಬೇಕಾಗಿ ಸಂಡೂರು ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್