ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗೆ ಅರ್ಜಿ ಸಲ್ಲಿಸಲು ನವೆಂಬರ್ 6 ಕೊನೆಯ ದಿನ
ಗದಗ, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮತದಾರರ ನೋಂದಣಿ ನಿಯಮಗಳು 1960 ರ 31 (4) ನೇ ನಿಯಮದ ಅನುಸಾರ ಸಂಬಂಧಿಸಿದ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬರ ವ್ಯಕ್ತಿಯು ಮತದಾರರ ನೊಂದಣಿ ನಿಯಮ 1960 ರನ್ವಯ ಮತ್ತು ದಿನಪತ್ರಿಕೆಯಲ್ಲಿ ಪ್ರಕಟಿಸಲಾ
ಪೋಟೋ


ಗದಗ, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮತದಾರರ ನೋಂದಣಿ ನಿಯಮಗಳು 1960 ರ 31 (4) ನೇ ನಿಯಮದ ಅನುಸಾರ ಸಂಬಂಧಿಸಿದ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಳ್ಳಲು ಅರ್ಹರಿರುವ ಪ್ರತಿಯೊಬ್ಬರ ವ್ಯಕ್ತಿಯು ಮತದಾರರ ನೊಂದಣಿ ನಿಯಮ 1960 ರನ್ವಯ ಮತ್ತು ದಿನಪತ್ರಿಕೆಯಲ್ಲಿ ಪ್ರಕಟಿಸಲಾದ ಎರಡನೇ ಅನುಸೂಚಿಯಲ್ಲಿ ಪುನರುದ್ಧರಿಸಿರುವ ನಮೂನೆ -18 ರಲ್ಲಿ ಅರ್ಜಿಯನ್ನು 6 ನೇ ನವೆಂಬರ್ 2025 ಅಥವಾ ಅದಕ್ಕೂ ಮೊದಲು ಮತದಾರರ ನೋಂದಣಾಧಿಕಾರಿಗಳ/ ಸಂಬಂಧಪಟ್ಟ ಸಹಾಯಕ ಮತದಾರರ ನೊಂದಣಾಧಿಕಾರಿಗಳ/ ನಿಯೋಜಿತ ಅಧಿಕಾರಿಗಳ ಕಚೇರಿಗೆ ಕಳುಹಿಸಲು ಕರೆ ನೀಡಲಾಗಿದೆ.

ಪದವೀಧರ ವ್ಯಕ್ತಿಯು ತಮ್ಮ ಹೆಸರನ್ನು ಇದುವರೆಗೂ ಸೇರಿಸದೇ ಇದ್ದಲ್ಲಿ ಇದ್ದಲ್ಲಿ ನಿಗದಿತ ನಮೂನೆ -18 ರಲ್ಲಿ 2025 ರ ನವೆಂಬರ್ 6 ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ವಿವರಗಳು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಇವರ ವೆಬ್‌ಸೈಟ್ ವಿಳಾಸ ಇಲ್ಲಿ ಲಭ್ಯವಿದೆ ಎಂದು ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರ ಮತದಾರರ ನೋಂದಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande