ಬೆಂಗಳೂರು, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಸರಕಾರಿ ಸ್ಥಳಗಳಲ್ಲಿ ಆರ್ಎಸ್ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಪತ್ರ ಬರೆದ ಹಿನ್ನೆಲೆ ತನಗೆ ಮತ್ತು ತನ್ನ ಕುಟುಂಬಕ್ಕೆ ಬೆದರಿಕೆಗಳು ಬರುತ್ತಿವೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಳೆದ ಎರಡು ದಿನಗಳಿಂದ ತನ್ನ ಮೊಬೈಲ್ ನಿರಂತರವಾಗಿ ರಿಂಗಣಿಸುತ್ತಿದೆ. ಕರೆಗಳು ಬೆದರಿಕೆಗಳಿಂದ ಕೂಡಿದೆ. ತನ್ನನ್ನು ಹಾಗೂ ತನ್ನ ಕುಟುಂಬವನ್ನು ಬೆದರಿಸುವ, ಅವಾಚ್ಯ ಶಬ್ದಗಳಿಂದ ನಿಂದಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ನಾನು ಇದರಿಂದ ವಿಚಲಿತನಾಗಿಲ್ಲ. ಅಚ್ಚರಿಗೂ ಒಳಗಾಗಿಲ್ಲ. ಆರ್ಎಸ್ಎಸ್ ಮಹಾತ್ಮ ಗಾಂಧಿ ಅಥವಾ ಅಂಬೇಡ್ಕರ್ರನ್ನೇ ಬಿಟ್ಟಿಲ್ಲ, ಇನ್ನು ನನ್ನನ್ನು ಬಿಡುತ್ತಾರಾ?. ಒಂದು ವೇಳೆ ಅವರು ವೈಯ್ಯಕ್ತಿಕ ನಿಂದನೆ ಮತ್ತು ಬೆದರಿಕೆಗಳಿಂದ ನನ್ನನ್ನು ಮೌನವಾಗಿಸಬಹುದು ಎಂದು ತಿಳಿದುಕೊಂಡಿದ್ದರೆ ಅದು ಅವರ ತಪ್ಪು ಗ್ರಹಿಕೆಯಾಗಿದೆ. ಇದು ಕೇವಲ ಆರಂಭವಾಗಿದೆ ಎಂದು ಹೇಳಿದ್ದಾರೆ.
ಬುದ್ಧ, ಬಸವಣ್ಣ, ಬಾಬಸಾಹೇಬ್ ತತ್ವ ಸಿದ್ಧಾಂತಗಳ ಮೇಲೆ ಸಮಾಜ ನಿರ್ಮಿಸುವ ಸಮಯ ಬಂದಿದೆ. ಅತ್ಯಂತ ಅಪಾಯಕಾರಿ ಆರ್ಎಸ್ಎಸ್ ನಿಂದ ದೇಶವನ್ನು ಶುದ್ಧೀಕರಿಸುವಂತೆ ಕರೆ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa