ಹೊಸಪೇಟೆ ವ್ಯಕ್ತಿ ಕಾಣೆ
ಹೊಸಪೇಟೆ, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹೊಸಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ವತಿ ನಗರದ (40) ಕಾಣೆಯಾಗಿದ್ದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ. ಕಾಣೆಯಾದ ವ್ಯಕ್ತಿಯ ಚಹರೆ : 5.9 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು,
ಹೊಸಪೇಟೆ ವ್ಯಕ್ತಿ ಕಾಣೆ


ಹೊಸಪೇಟೆ, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹೊಸಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ವತಿ ನಗರದ (40) ಕಾಣೆಯಾಗಿದ್ದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.

ಕಾಣೆಯಾದ ವ್ಯಕ್ತಿಯ ಚಹರೆ : 5.9 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ ಇದ್ದು ಮನೆಯಿಂದ ಹೋಗುವಾಗ ಕೆಂಪು ಬಣ್ಣದ ತುಂಬು ತೋಳಿನ ಅಂಗಿ, ನೀಲಿ ಬಣ್ಣದ ಗೆರೆಯುಳ್ಳ ಲುಂಗಿ ಧರಿಸಿರುತ್ತಾನೆ. ಕನ್ನಡ ಭಾಷೆಯನ್ನು ಮಾತನಾಡುತ್ತಾನೆ.

ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಪಿಐ ಪಟ್ಟಣ ಪೊಲೀಸ್ ಠಾಣೆ ಹೊಸಪೇಟೆ ದೂ.08394-224033, ಮೊ.9480805745, ಡಿಎಸ್‍ಪಿ ಹೊಸಪೇಟೆ ದೂ.08394-224204, ಮೊ.9480805720, ಎಸ್‍ಪಿ ಕಚೇರಿ ಮೊ.9480805700 ಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande