ಹೈನುಗಾರಿಕೆಯಲ್ಲಿ ಮೇವಿನ ಬೆಳೆಗಳ ಮಹತ್ವ ಕುರಿತು ಕಾರ್ಯಕ್ರಮ
ಹೈನುಗಾರಿಕೆಯಲ್ಲಿ ಮೇವಿನ ಬೆಳೆಗಳ ಮಹತ್ವ ಕುರಿತು ಕಾರ್ಯಕ್ರಮ
ಚಿತ್ರ : ಕೋಲಾರದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈನುಗಾರಿಕೆಯಲ್ಲಿ ಮೇವಿನ ಬೆಳೆಗಳ ಮಹತ್ವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.


ಕೋಲಾರ, ೧೪ ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆ, ಧಾರವಾಡ ಹಾಗೂ ಐಸಿಎಆರ್ - ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಇವರ ಸಹಯೋಗದಲ್ಲಿ “ಹೈನುಗಾರಿಕೆಯಲ್ಲಿ ಮೇವಿನ ಬೆಳೆಗಳ ಮಹತ್ವ ಮತ್ತು ಉತ್ಪಾದನಾ ತಾಂತ್ರಿಕತೆಗಳ” ಕುರಿತು ಸಾಮರ್ಥ್ಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಎಸ್.ಸಿ.ಎಸ್.ಪಿ-೨೦೨೪-೨೫ನೇ ಸಾಲಿನ ಯೋಜನೆಯಡಿಯಲ್ಲಿ ಪರಿಕರ ವಿತರಣೆ ಸಮಾರಂಭವನ್ನು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಧಾರವಾಡದ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಡಾ. ನಾಗರತ್ನ ಬಿರಾದರ್ರವರು ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಮೇವಿನ ಬೆಳೆಯಲ್ಲಿ ಯಾವುದನ್ನು ಬೆಳೆಯಬೇಕು, ಯಾವ ರೀತಿ ಬೆಳೆಯಬೇಕು, ಯಾವ ರೀತಿ ನಿರ್ವಹಣೆ ಮಾಡಬೇಕು, ಯಾವಾಗ ಕಟಾವು ಮಾಡಬೇಕು ಎಂಬ ಸೂಕ್ಷ್ಮವಾದ ಸಣ್ಣ ಸಣ್ಣ ವಿಚಾರಗಳನ್ನು ರೈತರು ತಿಳಿದುಕೊಂಡರೆ ಮೇವಿನ ಬೆಳೆಯಲ್ಲಿ ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು ಜೊತೆಗೆ ಅಂತರ್ ಬೇಸಾಯ ಮಾಡಲು ಸೈಕಲ್ ವೀಡರ್ನ್ನು ಬಳಸುವ ಕುರಿತು ತಿಳಿಸಿದರು.

ಅಧ್ಯಕ್ಷೀಯ ಭಾಷಣದಲ್ಲಿ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಶಿವಾನಂದ ಹೊಂಗಲರವರು ಮಾತನಾಡಿ, ವಿವಿಧ ಪೋಷಕಾಂಶಗಳುಳ್ಳ ಸೈಲೇಜ್, ಹೈಡ್ರೋಪ್ರೋನಿಕ್ಸ್, ಅಜೋಲ್ಲಾಗಳಂತಹ ಮೇವನ್ನು ಜಾನುವಾರುಗಳಿಗೆ ಕೊಡಬೇಕು. ಮೇವಿನ ಕೊರತೆ ನಿಗಿಸಬಹುದಾಂತಹ ಮೇವಿನ ಬೆಳೆಗಳನ್ನು ಬೆಳೆಯುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ತಿಳಿಸುತ್ತ, ಕೃಷಿಗೆ ಸಂಬಂಧಿತ ಯಾವುದೇ ಸಮಸ್ಯೆಗಳಿದ್ದರೆ ಕೃಷಿ ವಿಜ್ಞಾನ ಕೇಂದ್ರಕ್ಕೆ ಸಂಪರ್ಕಿಸಲು ರೈತರಿಗೆ ಸೂಚಿಸಲಾಯಿತು.

ತಾಂತ್ರಿಕ ಅಧಿವೇಶನದಲ್ಲಿ ಧಾರವಾಡದ ಭಾರತೀಯ ಹುಲ್ಲುಗಾವಲು ಮತ್ತು ಮೇವು ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿಗಳಾದ ಡಾ. ವಿನೋದ ಕುಮಾರ್ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಹೈನುಗಾರಿಕೆಯಲ್ಲಿ ಮೇವಿನ ಬೆಳೆಗಳ ಮಹತ್ವ ಮತ್ತು ಉತ್ಪಾದನಾ ತಾಂತ್ರಿಕತೆಗಳ ಕುರಿತು ವಿಸ್ತಾರವಾಗಿ ವಿವರಿಸಿದರು. ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿಯಾದ ಡಾ. ಅನಿಲ್ ಕುಮಾರ್ ಎಸ್, ರವರು ಸ್ವಚ್ಚ ಹಾಲು ಉತ್ಪಾದನಾ ತಾಂತ್ರಿಕತೆಗಳ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಸೈಕಲ್ ವೀಡರ್, ಫಾಡರ್ ಕಟ್ಟಿಂಗ್ಸ್ಗಳನ್ನು ಎಸ್ .ಸಿ.ಎಸ್.ಪಿ ರೈತರಿಗೆ ವಿತರಿಸಲಾಯಿತು.

ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಡಾ. ಶಶಿಧರ್ ಕೆ.ಆರ್, ವಿಜ್ಞಾನಿ (ರೇಷ್ಮೆಕೃಷಿ), ಡಾ. ಮಂಜುನಾಥ ರೆಡ್ಡಿ ಟಿ.ಬಿ, ವಿಜ್ಞಾನಿ (ಸಸ್ಯ ಸಂರಕ್ಷಣೆ), ಎಫ್.ಪಿ.ಓ ಬೈರ್ಕೂರದಿಂದ ಸುಬ್ರಮಣಿ, ಪತ್ರಕರ್ತರಾದ ಶ್ರೀನಿವಾಸ್, ಮುಳಬಾಗಿಲು, ಶ್ರೀನಿವಾಸಪುರ, ಬಂಗಾರಪೇಟೆ, ಅಬ್ಬಿಗೇರಿ, ಹೊಸಹಳ್ಳಿ ಗ್ರಾಮದ ಎಸ್.ಸಿ.ಎಸ್.ಪಿ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಿತ್ರ : ಕೋಲಾರದ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಹೈನುಗಾರಿಕೆಯಲ್ಲಿ ಮೇವಿನ ಬೆಳೆಗಳ ಮಹತ್ವ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande