ಹೊಸಪೇಟೆ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಬಳ್ಳಾರಿ ವತಿಯಿಂದ ಆರ್‍ಎಎಮ್‍ಪಿ ಯೋಜನೆಯಡಿ ಝುಡ್.ಇ.ಡಿ ಮತ್ತು ಲೀನ್ ಯೋಜನೆಯ ಕುರಿತು ನಗರದ ಮಲ್ಲಿಗೆ ಹೊಟೇಲ್‍ನಲ್ಲಿ ಅಕ್ಟೋಬರ್ 17 ರಂದು ಬೆ.10:30ಕ್ಕೆ ಒಂದು ದಿನದ ಜಾಗೃತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕರಾದ ಸೋಮಶೇಖರ್ ತಿಳಿಸಿದ್ದಾರೆ.
ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯಮಿಗಳಲ್ಲಿನ ಹಣಕಾಸು, ತಾಂತ್ರಿಕ ಮತ್ತು ಮಾರ್ಗದರ್ಶನ ಬೆಂಬಲದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಝುಡ್.ಇ.ಡಿ ಮತ್ತು ಲೀನ್ ಯೋಜನೆ ಸೌಲಭ್ಯಗಳು ಮತ್ತು ಯಶಸ್ಸಿನ ಕಥೆಗಳನ್ನು ತಿಳಿಸಲಾಗುತ್ತದೆ. ನೆಟ್‍ವಕಿರ್ಂಗ್‍ಗಾಗಿ ತಜ್ಞರು, ಅಧಿಕಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡುತ್ತದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಹಾಗೂ ಉದ್ಯಮಿದಾರರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್