ಗದಗ, 14 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ಮುಳಗುಂದ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ರ ಅಡಿಯಲ್ಲಿ ಐಇಸಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಘಟಕದಡಿಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯ ಕುರಿತು ನಗರ ಸ್ಥಳೀಯ ಮಟ್ಟದಲ್ಲಿ ವಿವಿಧ ಬಗೆಯ ಚಟುವಟಿಕೆಗಳನ್ನು ಕೈಗೊಳ್ಳಲು ನಲ್ಮ ಡೇ ಯೋಜನೆಯ ಸ್ವ ಸಹಾಯ ಸದಸ್ಯರುಗಳನ್ನು ಕಮ್ಯುನಿಟಿ ಮೊಬೈಲೈಜರ್ ಹುದ್ದೆಗೆ ಮಾಸಿಕ ಗೌರವ ಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆದುಕೊಳ್ಳಲು ಅವಕಾಶವಿದ್ದು ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿ ಕನಿಷ್ಟ ಎಸ್‌ಎಸ್‌ಎಲ್‌ಸಿ ಪಾಸ್ ಆಗಿರಬೇಕು. ಕನ್ನಡ ಭಾಷೆ ಓದು ಬರಹ ಜ್ಞಾನ ಹೊಂದಿರಬೇಕು. ಅರ್ಜಿಯೊಂದಿಗೆ ಇತ್ತೀಚಿನ 4 ಭಾವಚಿತ್ರಗಳು, ಆಧಾರ ಕಾರ್ಡ , ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾನ್ ಕಾರ್ಡ , ವಿದ್ಯಾರ್ಹತೆ ಸಂಬಂಧಿಸಿದ ದಾಖಲಾತಿಗಳು, ಕಂಪ್ಯೂಟರ್ ತರಬೇತಿ ಹೊಂದಿದ ಬಗ್ಗೆ ಪ್ರಮಾಣ ಪತ್ರ , ಡೇ ನಲ್ಮ ಯೋಜನೆಯ ಸ್ವ ಸಹಾಯ ಸಂಘದ ಸದಸ್ಯರಾಗಿರುವ ಬಗ್ಗೆ ಸಂಘದ ಪ್ರಮಾಣ ಪತ್ರ , ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ , ಅನುಭವ ಪ್ರಮಾಣ ಪತ್ರ ಇವುಗಳನ್ನು ಲಗತ್ತಿಸಬೇಕು.
ಅರ್ಜಿ ಸಲ್ಲಿಸಲು ಅಕ್ಟೋಬರ್ 24 ಕೊನೆಯ ದಿನವಾಗಿದ್ದು, ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮುಳಗುಂದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP