ಭಾರತ–ಮಂಗೋಲಿಯಾ ಸಂಬಂಧ ಬಲಪಡಿಸುವಲ್ಲಿ ರಿನ್‌ಪೋಚೆ ಪ್ರಮುಖರು : ಜೈರಾಮ್ ರಮೇಶ್
ನವದೆಹಲಿ, 13 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಮಂಗೋಲಿಯಾದ ಅಧ್ಯಕ್ಷ ಖುರೇಲ್ಸುಖ್ ಉಖ್ನಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಲಡಾಖ್‌ನ ಬೌದ್ಧ ಸನ್ಯಾಸಿ ಹಾಗೂ ಮಾಜಿ ರಾಯಭಾರಿ ಕುಶೋಕ್ ಬಕುಲಾ ರಿನ್‌ಪೋಚೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ ಅವರ
ಭಾರತ–ಮಂಗೋಲಿಯಾ ಸಂಬಂಧ ಬಲಪಡಿಸುವಲ್ಲಿ ರಿನ್‌ಪೋಚೆ ಪ್ರಮುಖರು : ಜೈರಾಮ್ ರಮೇಶ್


ನವದೆಹಲಿ, 13 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಮಂಗೋಲಿಯಾದ ಅಧ್ಯಕ್ಷ ಖುರೇಲ್ಸುಖ್ ಉಖ್ನಾ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಲಡಾಖ್‌ನ ಬೌದ್ಧ ಸನ್ಯಾಸಿ ಹಾಗೂ ಮಾಜಿ ರಾಯಭಾರಿ ಕುಶೋಕ್ ಬಕುಲಾ ರಿನ್‌ಪೋಚೆ ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ

ಅವರ ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಕಮ್ಯುನಿಸಂ ಪತನದ ನಂತರ ಭಾರತ–ಮಂಗೋಲಿಯಾ ಸಂಬಂಧಗಳ ಬಲಪಡಿಸುವಲ್ಲಿ ಮತ್ತು ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ಬೌದ್ಧ ಸಂಪ್ರದಾಯ ಪುನರುಜ್ಜೀವನಗೊಳಿಸುವಲ್ಲಿ ರಿನ್‌ಪೋಚೆ ಐತಿಹಾಸಿಕ ಪಾತ್ರ ವಹಿಸಿದ್ದರೆಂದು ಹೇಳಿದ್ದಾರೆ.

1989ರಲ್ಲಿ ಆಗಿನ ಪ್ರಧಾನಿ ರಾಜೀವ್ ಗಾಂಧಿ ಅವರು ರಿನ್‌ಪೋಚೆ ಅವರನ್ನು ಮಂಗೋಲಿಯಾದ ರಾಯಭಾರಿಯಾಗಿ ನೇಮಿಸಿದ್ದರು. ಅವರು ಹತ್ತು ವರ್ಷಗಳ ಕಾಲ ಭಾರತವನ್ನು ಪ್ರತಿನಿಧಿಸಿ, ಮಂಗೋಲಿಯಾದಲ್ಲಿ ಬೌದ್ಧಧರ್ಮದ ಪುನಃಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದರು ಎಂದಿದ್ದಾರೆ.

1955ರಲ್ಲಿ ಭಾರತ–ಮಂಗೋಲಿಯಾ ರಾಜತಾಂತ್ರಿಕ ಸಂಬಂಧಗಳು ಸ್ಥಾಪನೆಯಾಗಿದ್ದು, 1961ರಲ್ಲಿ ಮಂಗೋಲಿಯಾ ವಿಶ್ವಸಂಸ್ಥೆಗೆ ಸೇರುವಲ್ಲಿ ಭಾರತ ಮಹತ್ವದ ಪಾತ್ರ ವಹಿಸಿತು. ಟಿಬೆಟಿಯನ್ ಸಂಪ್ರದಾಯದಲ್ಲಿ 19ನೇ ಬಕುಲಾ ರಿನ್‌ಪೋಚೆ ಎಂದು ಗುರುತಿಸಲ್ಪಟ್ಟ ಅವರು ಸ್ವಾತಂತ್ರ್ಯ ಹೋರಾಟಗಾರ, ಸಾಮಾಜಿಕ ಸೇವಕ ಮತ್ತು ರಾಜತಾಂತ್ರಿಕರಾಗಿ ಖ್ಯಾತರಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande