ನವದೆಹಲಿ, 13 ಅಕ್ಟೋಬರ್ (ಹಿ.ಸ.) :
ಆ್ಯಂಕರ್ :
ಭಾರತ ಮತ್ತು ಕೆನಡಾ ಸೋಮವಾರ
ದ್ವಿಪಕ್ಷೀಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಹೊಸ ಮಾರ್ಗಸೂಚಿಗೆ ಒಪ್ಪಿಕೊಂಡಿವೆ.
ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ
ವಿದೇಶಾಂಗ ಸಚಿವ ಡಾ. ಎಸ್.
ಜೈಶಂಕರ್ ಅವರು ಕೆನಡಾದ ವಿದೇಶಾಂಗ
ಸಚಿವೆ ಅನಿತಾ ಆನಂದ್ ಅವರೊಂದಿಗೆ
ನಡೆಸಿದ ಮಾತುಕತೆ ವೇಳೆ ಈ
ಒಪ್ಪಂದಕ್ಕೆ ಬರಲಾಗಿದೆ.
ಮಾತುಕತೆಯ
ಬಳಿಕ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ, ಹಂಚಿಕೆಯ
ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮ
ಮತ್ತು ಸಾರ್ವಭೌಮತ್ವದ ತತ್ವಗಳ ಆಧಾರದ ಮೇಲೆ
ಸಂಬಂಧ ಪುನರ್‌ನಿರ್ಮಾಣಕ್ಕೆ ಎರಡೂ
ಕಡೆಯವರು ಬದ್ಧರಾಗಿದ್ದಾರೆ ಎಂದು ತಿಳಿಸಲಾಗಿದೆ. ಪ್ರಸ್ತುತ
ಜಾಗತಿಕ ಆರ್ಥಿಕ ಅನಿಶ್ಚಿತತೆ ಮತ್ತು
ಭೌಗೋಳಿಕ ಉದ್ವಿಗ್ನತೆಯ ನಡುವೆ ಬಲವಾದ ಭಾರತ–ಕೆನಡಾ ಸಂಬಂಧ
ಅಗತ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಹೊಸ ಮಾರ್ಗಸೂಚಿಯಡಿ ಶೀಘ್ರದಲ್ಲೇ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ
ಕುರಿತ ಸಚಿವರ ಮಾತುಕತೆ ಪ್ರಾರಂಭವಾಗಲಿದೆ.
ಕೆನಡಾ–ಭಾರತ ಸಿಇಒ
ವೇದಿಕೆ ಮತ್ತು ಇಂಧನ ಸಂವಾದವನ್ನು
ಮರುಪ್ರಾರಂಭಿಸಲಾಗುವುದು. ವಿಜ್ಞಾನ ಮತ್ತು ತಂತ್ರಜ್ಞಾನ
ಸಹಕಾರ ಸಮಿತಿಯೂ ಮರುಸಕ್ರಿಯಗೊಳ್ಳಲಿದೆ.
ಇದೇ ವೇಳೆ, ಹವಾಮಾನ ಕ್ರಮ,
ಪರಿಸರ ಸಂರಕ್ಷಣೆ, ಶುದ್ಧ ಇಂಧನ
ಸಹಕಾರ ಹಾಗೂ ಕೃತಕ ಬುದ್ಧಿಮತ್ತೆ
ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ
ಸಹಕಾರ ವಿಸ್ತರಿಸಲು ನಿರ್ಧರಿಸಲಾಗಿದೆ. ಕೃಷಿ, ಶಿಕ್ಷಣ, ಪ್ರವಾಸೋದ್ಯಮ,
ಸಾಂಸ್ಕೃತಿಕ ವಿನಿಮಯ ಮತ್ತು ವೃತ್ತಿಪರ
ಚಲನಶೀಲತೆಯಲ್ಲಿಯೂ ಸಹಕಾರ ಹೆಚ್ಚಿಸಲು ಒಪ್ಪಿಗೆ
ನೀಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa